ಟೆಸ್ಟ್ ಶ್ರೇಯಾಂಕ ಪಟ್ಟಿ: ಮೂರನೇ ಸ್ಥಾನದ್ಲಲಿ ಪೂಜಾರ, ಆಲ್ ರೌಂಡರ್ ವಿಭಾಗದಲ್ಲಿ ಜಡೇಜಗೆ ಟಾಪರ್ ಪಟ್ಟ

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ್ದ ಚೇತೇಶ್ವರ ಪೂಜಾರ 3 ನೇ ಸ್ಥಾನಕ್ಕೇರಿದ್ದಾರೆ.
ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ
ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ್ದ ಚೇತೇಶ್ವರ ಪೂಜಾರ 3 ನೇ ಸ್ಥಾನಕ್ಕೇರಿದ್ದಾರೆ.  
ಲಂಕಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡು ಪಂದ್ಯಗಳಲ್ಲಿ ಚೇತೇಶ್ವರ ಪೂಜಾರ ಶತಕ ದಾಖಲಿಸಿದ್ದಾರೆ. ಕೊಲಂಬೋ ಟೆಸ್ಟ್ ನಲ್ಲಿ 132 ರನ್ ಗಳನ್ನು ದಾಖಲಿಸಿದ್ದ ಅಜಿಂಕ್ಯ ರಹಾನೆ ಸಹ 11 ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ಜಿಗಿದಿದ್ದಾರೆ. 
ಇದೇ ವೇಳೆ ರವೀಂದ್ರ ಜಡೇಜಾ ಆಲ್ ರೌಂಡರ್ ವಿಭಾಗದಲ್ಲಿ ಟಾಪರ್ ಪಟ್ಟ ಪಡೆದಿದ್ದು, ಟೆಸ್ಟ್ ಬೌಲಿಂಗ್ ವಿಭಾಗದಲ್ಲಿ ಟಾಪ್ ಶ್ರೇಯಾಂಕದ ಬೌಲರ್ ಆಗಿ ಹೊರಹೊಮ್ಮಿದ್ದ ಜಡೇಜಾ ಬ್ಯಾಟಿಂಗ್ ವಿಭಾಗದಲ್ಲಿ 51 ನೇ ಸ್ಥಾನದಲ್ಲಿದ್ದಾರೆ. ಇನ್ನು ಬೌಲರ್ ಗಳಾದ ಮೊಹಮ್ಮದ್ ಶಮಿ 20 ನೇ ಸ್ಥಾನದಲ್ಲಿದ್ದು, ಉಮೇಶ್ ಯಾದವ್ 22 ನೇ ಸ್ಥಾನದಲ್ಲಿದ್ದಾರೆ. ಲಂಕಾದ ಕುಸಲ್ ಮೆಂಡಿಸ್ 10 ಸ್ಥಾನಗಳ ಮೇಲೇರಿದ್ದು, 19 ನೇ ಸ್ಥಾನದಲ್ಲಿದ್ದರೆ,  ಡಿಮತ್ ಕರುನಾರಾತ್ನೆ 24 ನೇ ಸ್ಥಾನ, ನಿರೋಷನ್ ಡಿಕ್ವೆಲ್ಲಾ 68 ನೇ ಸ್ಥಾನದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com