ನವದೆಹಲಿ: ಭಾರತದ 71ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾರತೀಯ ಕ್ರಿಕೆಟ್ ತಂಡ ಶ್ರೀಲಂಕಾದ ಕಾಂಡಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿತು. ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರೆ ಹಿನ್ನೆಲೆಯಲ್ಲಿ ರಾಷ್ಟ್ರಗೀತೆ ಮೊಳಗುತ್ತಿತ್ತು.
ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಈಗಾಗಲೇ ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ 3-0 ಅಂತರದಿಂದ ಜಯ ಸಾಧಿಸಿದೆ. ನಿನ್ನೆಗೆ ಸರಣಿ ಮುಕ್ತಾಯವಾಗಿದೆ.
ವಿದೇಶದಲ್ಲಿ ಭಾರತದ ಸಂಪೂರ್ಣ ಸರಣಿ ಗೆಲುವು ಸಾಧಿಸುತ್ತಿರುವುದು ಇದೇ ಮೊದಲಾಗಿದೆ. ಟೆಸ್ಟ್ ಸರಣಿ ಬಳಿಕ ಭಾರತ ತಂಡ 5 ಏಕದಿನ ಮತ್ತು ಟಿ20 ಅಂತಾರಾಷ್ಟ್ರೀಯ ಸರಣಿಯನ್ನು ಆಡಲಿದೆ. ವಿರಾಟ್ ಕೊಹ್ಲಿ ನಾಯಕತ್ವ ಮತ್ತು ಕೋಚ್ ರವಿ ಶಾಸ್ತ್ರಿಯವರ ಮಾರ್ಗದರ್ಶನದಡಿ ಈ ಪಂದ್ಯಗಳು ತಂಡಕ್ಕೆ ಮಹತ್ವವಾಗಿವೆ.
ಈ ವರ್ಷಾಂತ್ಯಕ್ಕೆ ಭಾರತ ತಂಡ ಮತ್ತೆ ಶ್ರೀಲಂಕಾ ಜೊತೆ ಆಡಲಿದೆ.