'ಭಾಷಾ ವಿವಾದ' ಅಭಿಮಾನಿ ಬಾಯಿ ಮುಚ್ಚಿಸಿದ ಹರ್ಭಜನ ಸಿಂಗ್

ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ಮತ್ತು ಅವರ ಟ್ವೀಟರ್ ಹಿಂಬಾಲಕರೊಬ್ಬರ ನಡುವೆ ಭಾಷಾ ವಿವಾದವೊಂದು ಹುಟ್ಟಿಕೊಂಡಿದ್ದು ದೊಡ್ಡ ಸುದ್ದಿ...
ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್
Updated on: 
ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ಮತ್ತು ಅವರ ಟ್ವೀಟರ್ ಹಿಂಬಾಲಕರೊಬ್ಬರ ನಡುವೆ ಭಾಷಾ ವಿವಾದವೊಂದು ಹುಟ್ಟಿಕೊಂಡಿದ್ದು ದೊಡ್ಡ ಸುದ್ದಿ ಮಾಡಿದೆ. 
ಇದಕ್ಕೆ ಕಾರಣವಾಗಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಟ್ವೀಟ್. ಕೊಹ್ಲಿ ತಾವು ಹೊಸದೊಂದು ಸ್ಪೀಕರ್ ಕೊಂಡುಕೊಂಡಿರುವುದಾಗಿ ಟ್ವೀಟಿಸಿದ್ದರು. ಇದಕ್ಕೆ ಹರ್ಭಜನ್ ಸಿಂಗ್ ನನಗೊಂದು ಕಳುಹಿಸಿ ಎಂದು ಭಜ್ಜಿ ಇಂಗ್ಲಿಷ್ ನಲ್ಲಿ ಪ್ರತಿಕ್ರಿಯಿಸಿದರು. 
ಇದಕ್ಕೆ ಸುಗೇಶ್ ಪಥಿ ಎಂಬ ಹಿಂಬಾಲಕ ಕಡೆಗೂ ನೀವು ಇಂಗ್ಲಿಷ್ ನಲ್ಲಿ ಪೋಸ್ಟ್ ಮಾಡಿದಿರಿ ಎಂದು ಪ್ರತಿಕ್ರಿಯಿಸಿದರು. ಇದು ಹರ್ಭಜನ್ ಸಿಂಗ್ ರನ್ನು ಕೆರಳಿಸಿದೆ. ಇದಕ್ಕೆ ಸಿಟ್ಟಿನಲ್ಲಿ ಉತ್ತರಿಸಿದ ಭಜ್ಜಿ, ಈ ಇಂಗ್ಲಿಷ್ ಜಿಯನ್ನು ನೋಡಿದಿರಾ? ಹಿಂದಿಯಲ್ಲಿ ಮಾತನಾಡುವುದು ನಾಚಿಕೆಯ ವಿಷಯವೇ? ಇಂಗ್ಲಿಷ್ ನ ಹಿಂದೆ ಈ ರೀಯ ಓಡುತ್ತಿರುವ ನಿಮಗೆ ನಾಚಿಕೆಯಾಗಬೇಕು ಎಂದು ಬೈದಿದ್ದಾರೆ. 
ಇದಕ್ಕೆ ಕೆಲವರು ಸುಗೇಶ್ ಪಥಿ ಚೆನ್ನೈಯವರು ಅವರಿಗೆ ಹಿಂದಿ ಅರ್ಥವಾಗುವುದಿಲ್ಲ ಎಂದು ಭಜ್ಜಿಗೆ ಮನವರಿಕೆ ಮಾಡಿಕೊಟ್ಟರು. ನಿಮ್ಮ ಉತ್ತರ ಬಹಳ ಕಠಿಣವಾಗಿತ್ತು. ಇದು ಸರಿಯಲ್ಲ ಎಂದೂ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com