ಪಲ್ಲೆಕಿಲೆ: ಅನಾನುಭವಿ ಆಟಗಾರರನ್ನೇ ಹೊಂದಿದ್ದು ಸತತ ಸೋಲುಗಳಿಂದ ಕಂಗೆಟ್ಟಿರುವ ಶ್ರೀಲಂಕಾ ತಂಡಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬದಲಾವಣೆಯ ಪಾಠ ಮಾಡಲಿದ್ದಾರೆ.
ವಿರಾಟ್ ಕೊಹ್ಲಿ ಅವರಿಗೆ ಶ್ರೀಲಂಕಾ ತಂಡದ ಕೋಚ್ ನಿಕ್ ಪೊಥಾಸ್ ಅವರು ಮನವಿ ಮಾಡಿದ್ದರು. ಇದಕ್ಕೆ ಸಮ್ಮತಿಸಿರುವ ವಿರಾಟ್ ಕೊಹ್ಲಿ ಈ ಕಾರ್ಯಕ್ಕೆ ತಾನು ಮುಕ್ತವಾಗಿ ಲಭ್ಯವಿರುವುದಾಗಿ ತಿಳಿಸಿದ್ದಾರೆ.
ಇನ್ನು ಉಭಯ ತಂಡಗಳ ನಡುವೆ ಏಕದಿನ ಮತ್ತು ಟಿ20 ಸರಣಿ ನಡೆಯುತ್ತಿರುವುದರಿಂದ ಈ ಸರಣಿಗಳು ಮುಗಿದ ಬಳಿಕ ತಾವು ಬದಲಾವಣೆಯ ಪಾಠ ಮಾಡುವುದಾಗಿ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.