ನಾಯಕತ್ವಕ್ಕೆ ಎಂಎಸ್ ಧೋನಿ ನಿವೃತ್ತಿ ಹಿಂದಿನ ಅಸಲಿ ಕಾರಣ!

ಟೀಂ ಇಂಡಿಯಾ ಸೀಮಿತ ಓವರ್ ಗಳ ನಾಯಕತ್ವಕ್ಕೆ ದಿಢೀರ್ ನಿವೃತ್ತಿ ಘೋಷಿಸಿ ಮಹೇಂದ್ರ ಸಿಂಗ್ ಧೋನಿ ಅಚ್ಚರಿ ಮೂಡಿಸಿದ್ದರು. ಆದರೆ ಅವರ ದಿಢೀರ್ ನಿವೃತ್ತಿ ಘೋಷಣೆಗೆ...
ಎಂಎಸ್ ಧೋನಿ
ಎಂಎಸ್ ಧೋನಿ

ಪುಣೆ: ಟೀಂ ಇಂಡಿಯಾ ಸೀಮಿತ ಓವರ್ ಗಳ ನಾಯಕತ್ವಕ್ಕೆ ದಿಢೀರ್ ನಿವೃತ್ತಿ ಘೋಷಿಸಿ ಮಹೇಂದ್ರ ಸಿಂಗ್ ಧೋನಿ ಅಚ್ಚರಿ ಮೂಡಿಸಿದ್ದರು. ಆದರೆ ಅವರ ದಿಢೀರ್ ನಿವೃತ್ತಿ ಘೋಷಣೆಗೆ ಅಸಲಿ ಕಾರಣ ಇಲ್ಲಿದೆ.

ಕ್ರಿಕೆಟ್ ಮೂರು ಮಾದರಿಗಳ ತಂಡಕ್ಕೂ ಪ್ರತ್ಯೇಕ ನಾಯಕರಿರುವ ಪದ್ಧತಿ ಭಾರತೀಯ ಕ್ರಿಕೆಟ್ ಗೆ ಸರಿ ಹೊಂದುವುದಿಲ್ಲ ಹೀಗಾಗಿ ನಾನು ಸೀಮಿತ ಓವರ್ ತಂಡದ ನಾಯಕತ್ವಕ್ಕೆ ನಿವೃತ್ತಿ ಘೋಷಿಸಿದೆ ಎಂದು ಧೋನಿ ಹೇಳಿದ್ದಾರೆ.

ಸದ್ಯ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ಸಾರಥ್ಯ ವಹಿಸಿದ್ದಾರೆ. ಅಂತೆ ಏಕದಿನ ಮತ್ತು ಟಿ20 ಮಾದರಿಗೂ ಒಬ್ಬರೆ ನಾಯಕನಾದರೇ ತಂಡವನ್ನು ಉತ್ತಮವಾಗಿ ಮುನ್ನಡೆಸಬಹುದು ಎಂದು ಹೇಳಿದರು. ಬಳ ಹಿಂದೆಯೇ ತಾನು ಪದತ್ಯಾಗದ ನಿರ್ಧಾರ ತೆಗೆದುಕೊಂಡಿದ್ದೇ ಅದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೂ ತಿಳಿಸಿದ್ದೆ. ಆದರೆ ಇದನ್ನು ಬಹಿರಂಗಪಡಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆ ಎಂದು ಧೋನಿ ಹೇಳಿದ್ದಾರೆ.

ಇನ್ನು ನಾಯಕತ್ವ ತ್ಯಜಿಸಿದರೂ ನೂತನ ನಾಯಕನಾಗಿರುವ ಕೊಹ್ಲಿಗೆ ಸಲಹೆ ಸೂಚನೆಗಳನ್ನು ನೀಡುವ ಕೆಲಸ ಮುಂದುವರಿಸುತ್ತೇನೆ. ವಿಕೆಟ್ ಕೀಪರ್ ಯಾವಾಗಲೂ ತಂಡದ ಉಪನಾಯಕನಿದ್ದಂತೆ. ನಾಯಕನಿಗೆ ಏನು ಬೇಕು ಎಂಬುದರ ಬಗ್ಗೆ ನಾನು ಸದಾ ಗಮನವಿಡುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com