ನಾಗ್ಪುರ ಟಿ20: ಇಂಗ್ಲೆಂಡ್ ಗೆಲ್ಲಲು 145 ರನ್ ಗಳ ಗುರಿ

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು ಭಾರತ 145 ರನ್ ಗಳ ಗುರಿ ನೀಡಿದೆ.
ಅರ್ಧ ಶತಕ ಸಿಡಿಸಿದ ಕೆಎಲ್ ರಾಹುಲ್
ಅರ್ಧ ಶತಕ ಸಿಡಿಸಿದ ಕೆಎಲ್ ರಾಹುಲ್

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು ಭಾರತ 145 ರನ್ ಗಳ ಗುರಿ ನೀಡಿದೆ.

ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರ ಆಕರ್ಷಕ ಅರ್ಧ ಶತಕ ಹಾಗೂ ಕರ್ನಾಟಕದ ಮತ್ತೋರ್ವ ಆಟಗಾರ ಮನೀಷ್ ಪಾಂಡೆ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್  ನಷ್ಟಕ್ಕೆ 144 ರನ್ ಗಳನ್ನು ಕಲೆ ಹಾಕಿತು. ಇಂಗ್ಲೆಂಡ್ ಕರಾರುವಕ್ಕಾದ ಬೌಲಿಂಗ್ ದಾಳಿಗೆ ತ್ತರಿಸಿದ ಭಾರತ  ಇಂಗ್ಲೆಂಡ್ ಗೆಲ್ಲಲು 145 ರನ್ ಗಳ ಸವಾಲಿನ ಗುರಿ ನೀಡಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡ ಭಾರತವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿತು. ಅದರಂತೆ ಬ್ಯಾಟಿಂಗ್ ಗೆ ಇಳಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ತಂಡಕ್ಕೆ ಭದ್ರ ಬುನಾದಿ  ಹಾಕಲು ಯತ್ನಿಸಿದರು. ಆದರೆ ಪಂದ್ಯದ 5ನೇ ಓವರ್ ನಲ್ಲಿ 21 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ನಾಯಕ ಕೊಹ್ಲಿ ಜೋರ್ಡಾನ್ ಬೌಲಿಂಗ್ ನಲ್ಲಿ ಭಾರಿ ಹೊಡೆತಕ್ಕೆ ಕೈ ಹಾಕಿ ಡಾವ್ಸನ್ ಗೆ ವಿಕೆಟ್ ಒಪ್ಪಿಸಿದರು. ಆರಂಭಿಕ  ಆಘಾತದಿಂದ ಭಾರತ ಚೇತರಿಸಿಕೊಳ್ಳುವಷ್ಟರಲ್ಲಿಯೇ ಮತ್ತೆ ಸುರೇಶ್ ರೈನಾ ವಿಕೆಟ್ ಒಪ್ಪಿಸಿದರು. ಕೇವಲ 7 ರನ್ ಗಳಿಸಿದ್ದ ರೈನಾ ರಷೀದ್ ಬೌಲಿಂಗ್ ನಲ್ಲಿ ಜೋರ್ಡಾನ್ ಗೆ ಕ್ಯಾಚಿತ್ತು ಹೊರ ನಡೆದರು.

ಬಳಿಕ ಬಂದ ಯುವರಾಜ್ ಸಿಂಗ್ ಮತ್ತು ಕೆಎಲ್ ರಾಹುಲ್ ಭಾರತ ತಂಡಕ್ಕೆ ಬೆನ್ನೆಲುಬಾಗಿ ನಿಲ್ಲುವ ಪ್ರಯತ್ನ ಮಾಡಿದರಾದರೂ, ಆಂಗ್ಲ ಪಡೆಯ ಸ್ಪಿನ್ ದಾಳಿಗೆ ಯುವಿ ಬಲಿಯಾದರು. ಆಗ ಯುವಿ ಕೇವಲ 4 ರನ್ ಗಳನ್ನಷ್ಟೇ  ಗಳಿಸಿದ್ದರು. ಬಳಿಕ ಕರ್ನಾಟಕದ ಆಟಗಾರ ಮನೀಷ್ ಪಾಂಡೆ ಜೊತೆಗೂಡಿದ ಕೆಎಲ್ ರಾಹುಲ್ ತಂಡದ ರನ್ ಗತಿಗೆ ವೇಗ ನೀಡಿದರು. ಅಂತೆಯೇ ತಮ್ಮ ಅರ್ಧಶತಕವನ್ನು ಕೂಡ ಕೆಎಲ್ ರಾಹುಲ್ ಪೂರ್ಣಗೊಳಿಸಿದರು. ರಾಹುಲ್  ಮತ್ತು ಮನೀಷ್ ಪಾಂಡೆ ಜೋಡಿ ಅರ್ಝಶತಕದ ಜೊತೆಯಾಟವಾಡಿತ್ತು. ಈ ವೇಳೆ ಜೋರ್ಡಾನ್ ಬೌಲಿಂಗ್ ನಲ್ಲಿ ಭಾರಿ ಹೊಡೆತಕ್ಕೆ ಮುಂದಾದ ರಾಹುಲ್, ಸ್ಟೋಕ್ಸ್ ಗೆ ಕ್ಯಾಚಿತ್ತು ಔಟ್ ಆದರು. ಈ ವೇಳೆಗಾಗಲೇ ರಾಹುಲ್ ಭರ್ಜರಿ  71 ರನ್ ಗಳಿಸಿದ್ದರು. ಬಳಿರ ಪಾಂಡೆ ಜೊತೆ ಗೂಡಿದ ಮಹೇಂದ್ರ ಸಿಂಗ್ ಧೋನಿ ಅಂತಿಮ ಓವರ್ ಗಳಲ್ಲಿ ತಂಡದ ರನ್ ವೇಗ ಹೆಚ್ಚಿಸಿದರು. ಆದರೆ ಈ ಹಂತದಲ್ಲಿ 30 ರನ್ ಗಳಿಸಿದ್ದ ಪಾಂಡೆ ಮಿಲ್ಸ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್  ಆದರು. ಬಳಿಕ ಪಾಂಡೆ ಅಂತಿಮ ಓವರ್ ನಲ್ಲಿ ರನೌಟ್ ಗೆ ಬಲಿಯಾದರು. ಬಳಿಕ ಮಿಶ್ರಾ ಕೂಡ ರನೌಟ್ ಆದರು. ಅಂತಿಮ ಎಸೆತದಲ್ಲಿ ಧೋನಿ ಕ್ಲೀನ್ ಬೋಲ್ಡ್ ಆಗುವುದರೊಂದಿಗೆ ಭಾರತದ 150ರ ಗಡಿ ದಾಟುವ ಆಸೆ ಛಿದ್ರವಾಯಿತು.

ಅಂತಿಮವಾಗಿ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್ ಗಳನ್ನಷ್ಟೇ ಕಲೆ ಹಾಕಿತು. ಇಂಗ್ಲೆಂಡ್ ಪರ ಜೋರ್ಡಾನ್ 3, ರಷೀದ್, ಮಿಲ್ಸ್ ಮತ್ತು ಅಲಿ ತಲಾ 1 ವಿಕೆಟ್ ಪಡೆದರು.

ಸೆಹ್ವಾಗ್ ದಾಖಲೆ ಮುರಿದ ಕೆಎಲ್ ರಾಹುಲ್
ಭಾರತದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್, 71 ರನ್ ಗಳಿಸಿದರು. ಆ ಮೂಲಕ ಇಂಗ್ಲೆಂಡ್ ವಿರುದ್ಧ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತೀ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಭಾರತದ ಆಟಗಾರ ಎಂಬ ಕೀರ್ತಿಗೆ  ಭಾಜನರಾದರು. ಇದಕ್ಕೂ ಮೊದಲು 2007 ಸೆಪ್ಟೆಂಬರ್ 19ರಂದು ವಿರೇಂದ್ರ ಸೆಹ್ವಾಗ್ ಡರ್ಬನ್ ನಲ್ಲಿ ಗಳಿಸಿದ್ದ 68 ರನ್ ಗಳೇ ಅಂಗ್ಲರ ವಿರುದ್ಧ ಭಾರತೀಯ ಆಟಗಾರ ಸಿಡಿಸಿದ್ದ ಅತೀ ಹೆಚ್ಚು ರನ್ ಗಳಿಕೆಯಾಗಿತ್ತು. 2014ರಲ್ಲಿ  ಬರ್ಮಿಂಗ್ ಹ್ಯಾಮ್ ನಲ್ಲಿ ಕೊಹ್ಲಿ 66 ರನ್ ಗಳಿಸಿದ್ದು, ಈ ಹಿಂದಿನ ದಾಖಲೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com