ರವಿಶಾಸ್ತ್ರಿ ನೇಮಕಕ್ಕೆ ಗಂಗೂಲಿ ವಿರೋಧವೇ ಅಧಿಕೃತ ಘೋಷಣೆ ವಿಳಂಬಕ್ಕೆ ಕಾರಣ!

ಮಂಗಳವಾರ ನಡೆದ ಟೀಂ ಇಂಡಿಯಾದ ನೂತನ ಕೋಚ್ ನೇಮಕ ಹೈಡ್ರಾಮ ಕೊನೆಗೂ ಮುಕ್ತಾಯವಾಗಿದೆಯಾದರೂ, ಬಿಸಿಸಿಐನ ಈ ಗೊಂದಲಕ್ಕೆ ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ಅವರೇ ಕಾರಣ ಎಂದು ಹೇಳಲಾಗುತ್ತಿದೆ.
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ಮುಂಬೈ: ಮಂಗಳವಾರ ನಡೆದ ಟೀಂ ಇಂಡಿಯಾದ ನೂತನ ಕೋಚ್ ನೇಮಕ ಹೈಡ್ರಾಮ ಕೊನೆಗೂ ಮುಕ್ತಾಯವಾಗಿದೆಯಾದರೂ, ಬಿಸಿಸಿಐನ ಈ ಗೊಂದಲಕ್ಕೆ ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ಅವರೇ ಕಾರಣ ಎಂದು ಹೇಳಲಾಗುತ್ತಿದೆ.

ಬಿಸಿಸಿಐ ಮೂಲಗಳ ಪ್ರಕಾರ ನಿನ್ನೆಯ ಕೋಚ್ ಆಯ್ಕೆ ಕುರಿತ ಗೊಂದಲಕ್ಕೆ ಸೌರವ್ ಗಂಗೂಲಿ ಅವರೇ ಕಾರಣ ಎಂದು ಹೇಳಲಾಗುತ್ತಿದೆ. ಕ್ರಿಕೆಟ್ ಸಲಹಾ ಸಮಿತಿ ಸದಸ್ಯರೂ ಕೂಡ ಆಗಿರುವ ಸೌರವ್ ಗಂಗೂಲಿ ಅವರಿಗೆ ರವಿಶಾಸ್ತ್ರಿ  ಟೀಂ ಇಂಡಿಯಾ ಕೋಚ್ ಆಗುವುದು ಸುತಾರಾಂ ಇಷ್ಟವಿರಲಿಲ್ಲವಂತೆ. ಸಿಎಸಿಯ ಇತರೆ ಸದಸ್ಯರಾದ ಸಚಿನ್ ತೆಂಡೂಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ರವಿಶಾಸ್ತ್ರಿಗೆ ಗ್ರೀನ್ ಸಿಗ್ನಲ್ ನೀಡಿದ್ದರೂ ಸೌರವ್ ಗಂಗೂಲಿ ಮಾತ್ರ ಒಪ್ಪಿಗೆ  ನೀಡಿರಲಿಲ್ಲವಂತೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಆದರೆ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಒಲವು ರವಿಶಾಸ್ತ್ರಿ ಪರವಾಗಿ ಇದ್ದ ಕಾರಣ ಸಿಎಸಿ ಸದಸ್ಯರು ಸೌರವ್ ಗಂಗೂಲಿ ಅವರನ್ನು ಓಲೈಕೆ ಮಾಡಿದರಂತೆ. ಈ ವೇಳೆ ಮಧ್ಯ ಪ್ರವೇಶಿಸಿದ್ದ ಸಚಿನ್ ತೆಂಡೂಲ್ಕರ್ ಅವರು  ಗಂಗೂಲಿ ಜೊತೆ ಸಂಧಾನ ನಡೆಸಿ ಅವರನ್ನು ಸಂತೈಸಿದ್ದರು. ಈ ವೇಳೆ ಏಕೈಕ ಷರತ್ತಿನ ಮೇರೆಗೆ ಗಂಗೂಲಿ ರವಿಶಾಸ್ತ್ರಿ ಅವರನ್ನು ನೂತನ ಕೋಚ್ ಆಗಿ ನೇಮಿಸಲು ಒಪ್ಪಿಗೆ ಸೂಚಿಸಿದ್ದಾರೆ. ಅದೇನೆಂದರೆ ಟೀಂ ಇಂಡಿಯಾದ  ಮಾಜಿ ಆಟಗಾರ ಜಹೀರ್ ಖಾನ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದರೆ ಮಾತ್ರ ರವಿಶಾಸ್ತ್ರಿ ಅವರನ್ನು ಕೋಚ್ ಆಗಿ ನೇಮಕ ಮಾಡಲು ಒಪ್ಪಿಗೆ ನೀಡುವುದಾಗಿ ಹೇಳಿದರಂತೆ.

ಇದೇ ಕಾರಣಕ್ಕೆ ಸಚಿನ್ ತೆಂಡೂಲ್ಕರ್ ಅವರು ಜಹೀರ್ ಖಾನ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಲು ಹೆಸರು ಸೂಚಿಸಿದರು ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಭರತ್ ಅರುಣ್ ಅವರನ್ನು ಬೌಲಿಂಗ್ ಕೋಚ್ ಆಗಿ  ನೇಮಿಸಲು ನಿರ್ಧರಿಸಲಾಗಿತ್ತಾದರೂ ಅಂತಿಮ ಕ್ಷಣದಲ್ಲಿ ಜಹೀರ್ ಖಾನ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com