ಇಂಗ್ಲೆಂಡ್ ತಂಡದಿಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಪೀಟರ್ಸೆನ್ ಶಿಫ್ಟ್?

ಇಂಗ್ಲೆಂಡ್‌ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಬ್ಯಾಟ್ಸ್‌ ಮನ್ ಕೇವಿನ್ ಪೀಟರ್ಸನ್ ತಮ್ಮ ತಾಯ್ನಾಡು ದಕ್ಷಿಣ ಆಫ್ರಿಕಾಕ್ಕೆ ವಾಪಸಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಲಂಡನ್: ಇಂಗ್ಲೆಂಡ್‌ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಬ್ಯಾಟ್ಸ್‌ ಮನ್ ಕೇವಿನ್ ಪೀಟರ್ಸನ್ ತಮ್ಮ ತಾಯ್ನಾಡು ದಕ್ಷಿಣ ಆಫ್ರಿಕಾಕ್ಕೆ ವಾಪಸಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ.

37ರ ಹರೆಯದ ಪೀಟರ್ಸನ್ 2019ರಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ ನಲ್ಲಿ ದಕ್ಷಿಣ ಆಫ್ರಿಕದ ಪರ ಆಡುವ ಅರ್ಹತೆ ಹೊಂದಿದ್ದಾರೆ. 2013-14ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಆ್ಯಶಸ್ ಸರಣಿಯ ಬಳಿಕ ಪೀಟರ್ಸನ್‌ ರನ್ನು  ಇಂಗ್ಲೆಂಡ್ ತಂಡಕ್ಕೆ ಆಯ್ಕೆ ಮಾಡದೇ ಸಂಪೂರ್ಣ ನಿರ್ಲಕ್ಷಿಸಲಾಗಿತ್ತು. ಬಳಿಕ ತಂಡದಿಂದ ವಿಮುಖರಾಗಿದ್ದ ಕೆವಿನ್ ಪೀಟರ್ಸೆನ್ ಇದೀಗ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬುಧವಾರ ಓವಲ್‌ನಲ್ಲಿ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಎಸೆಕ್ಸ್ ತಂಡದ ವಿರುದ್ಧ 35 ಎಸೆತಗಳಲ್ಲಿ 4 ಸಿಕ್ಸರ್‌ಗಳ ಸಹಿತ 52 ರನ್ ಗಳಿಸಿ ಸರ್ರೆ ತಂಡಕ್ಕೆ 10 ರನ್‌ ಗಳ ಜಯ ತಂದುಕೊಟ್ಟ ಬಳಿಕ ಪೀಟರ್ಸನ್ ಸುದ್ದಿಗಾರರೊಂದಿಗೆ  ಮಾತನಾಡಿದ ಕೆಪಿ, "ನನಗೆ ವಿಶ್ವಕಪ್‌ ನಲ್ಲಿ ಭಾಗವಹಿಸಲು ಇನ್ನು ಎರಡು ವರ್ಷ ಕಾಲಾವಕಾಶವಿದೆ. ನಾನು ಕಾದು ನೋಡಲು ಬಯಸಿದ್ದೇನೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ದಕ್ಷಿಣ ಆಫ್ರಿಕ ಕ್ರಿಕೆಟ್‌ ನಲ್ಲಿ ಸಾಕಷ್ಟು  ಪಂದ್ಯಗಳನ್ನು ಆಡಲು ಯೋಚಿಸಿದ್ದೇನೆ. ನನಗೆ ಬ್ಯಾಟಿಂಗ್ ಎಂದರೆ ತುಂಬಾ ಇಷ್ಟ. ಹಾಗಾಗಿ ಸಾಧ್ಯವಾದಷ್ಟು ಕಾಲ ಬ್ಯಾಟಿಂಗ್‌ ನ್ನು ಮುಂದುವರಿಸುವೆ. ಇನ್ನೆರಡು ವರ್ಷಗಳಲ್ಲಿ ಏನಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ'' ಎಂದು  ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com