ಗಾಲೆ ಟೆಸ್ಟ್: ಶ್ರೀಲಂಕಾ ವಿರುದ್ಧ ಬೃಹತ್ ಮೊತ್ತ ಪೇರಿಸಿದ ಭಾರತ 600ಕ್ಕೆ ಆಲೌಟ್!

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟ ಮುಂದುವರೆದಿದ್ದು, 600 ರನ್ ಗಳ ಬೃಹತ್ ಮೊತ್ತ ಪೇರಿಸಿದ ಭಾರತ ತಂಡ ಆಲೌಟ್ ಆಗಿದೆ.
ಪಾಂಡ್ಯಾ ಬ್ಯಾಟಿಂಗ್ ವೈಖರಿ
ಪಾಂಡ್ಯಾ ಬ್ಯಾಟಿಂಗ್ ವೈಖರಿ

ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟ ಮುಂದುವರೆದಿದ್ದು, 600 ರನ್ ಗಳ ಬೃಹತ್ ಮೊತ್ತ ಪೇರಿಸಿದ ಭಾರತ ತಂಡ ಆಲೌಟ್ ಆಗಿದೆ.

ಮೊದಲ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 399 ರನ್ ಗಳಿಸಿ 2ನೇ ದಿನದಾಟಕ್ಕೆ ಆಟ ಕಾಯ್ದುಕೊಂಡಿತ್ತು. ನಿನ್ನೆ 144 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪೂಜಾರಾ ಇಂದು ಕೇವಲ 7 ರನ್ ಗಳಿಸಿ ಎನ್ ಪ್ರದೀಪ್ ಗೆ  ವಿಕೆಟ್ ಒಪ್ಪಿಸಿದರು. ಪೂಜಾರ ಬಳಿಕ ರಹಾನೆ ಕೂಡ ಅರ್ಧಶತಕ ಗಳಿಸಿ ಲಾಹಿರು ಕುಮಾರಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ ಗೆ ಬಂದ ಆರ್ ಆಶ್ವಿನ್ 60 ಎಸೆತಗಳಲ್ಲಿ 47 ರನ್ ಗಳಿಸಿದರು. ವೃದ್ಧಿಮಾನ್ ಸಹಾ 17 ರನ್ ಗೆ ವಿಕೆಟ್  ಒಪ್ಪಿಸಿದರೆ, ಅರ್ಧಶತಕದ ಅಶ್ವಿನ್ ಕೂಡ ಅರ್ಧಶತಕ ಹೊಸ್ತಿಲಲ್ಲಿ ಯಡವಿ ಎನ್ ಪ್ರದೀಪ್ ಗೆ ವಿಕೆಟ್ ಒಪ್ಪಿಸಿದರು.

ಬಳಿಕ ಕ್ರೀಸ್ ಗೆ ಆಗಮಿಸಿದ ಹಾರ್ದಿಕ್ ಪಾಂಡ್ಯಾ ಕ್ರೀಸ್ ನಲ್ಲಿದ್ದ ಸ್ವಲ್ಪ ಹೊತ್ತು ಲಂಕಾ ಬೌಲರ್ ಗಳ ಬೆವರಿಳಿಸಿದರು. ಪದಾರ್ಪಣೆ ಪಂದ್ಯದಲ್ಲೇ ಪಾಂಡ್ಯಾ ಅರ್ಥಶತಕ ಸಿಡಿಸಿದ್ದು ವಿಶೇಷವಾಗಿತ್ತು. ಕೇವಲ 49 ಎಸೆತಗಳನ್ನು  ಎದುರಿಸಿದ ಪಾಂಡ್ಯಾ 5 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಗಳ ನೆರವಿನಿಂದ ಅರ್ಧಶತಕ ಪೂರೈಸಿದರು. ಬಳಿಕ ಲಾಹಿರು ಕುಮಾರಗೆ ವಿಕೆಟ್ ಒಪ್ಪಿಸಿದರು. ಬಳಿಕ ಜಡೇಜಾ (15 ರನ್), ಶಮಿ (30 ರನ್) ಹಾಗೂ ಉಮೇಶ್  ಯಾದವ್ (11 ರನ್) ವೇಗವಾಗಿ ರನ್ ಗಳಿಸಲು ಹೋಗಿ ವಿಕೆಟ್ ಕೈ ಚೆಲ್ಲಿದರು.

ಅಂತಿಮವಾಗಿ ಭಾರತ ತಂಡ 600 ರನ್ ಗಳಿಗೆ ಆಲ್ ಔಟ್ ಆಯಿತು.  ಶ್ರೀಲಂಕಾ ಪರ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಎನ್ ಪ್ರದೀಪ್ 6 ವಿಕೆಟ್ ಕಬಳಿಸಿ ಯಶಸ್ವೀ ಬೌಲರ್ ಎನಿಸಿದರೆ, ಲಾಹಿರು  ಕುಮಾರ 3 ವಿಕೆಟ್ ಪಡೆದು ಉತ್ತಮ ಸಾಥ್ ನೀಡಿದರು. ಅಂತೆಯೇ ಅನುಭವಿ ರಂಗನಾ ಹೆರಾತ್ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com