ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧ 8 ವಿಕೆಟ್ ಗಳಿಂದ ಜಯ ಗಳಿಸಿದ್ದು ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.
ಲಂಡನ್ ನ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 6 ವಿಕೆಟ್ ನಷ್ಟಕ್ಕೆ ಭರ್ಜರಿ 305 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ಆಸರೆಯಾದರೂ ಇದರೊಂದಿಗೆ ತಂಡ 8 ವಿಕೆಟ್ ಗಳಿಂದ ಜಯ ಸಾಧಿಸಿತು.
ಬಾಂಗ್ಲಾದೇಶ ಪರ ತಮೀಮ್ ಇಕ್ಬಾಲ್ 128, ಸೌಮ್ಯ ಸರ್ಕಾರ್ 28, ಇಮ್ರುಲ್ ಕಯೀಸ್ 19, ಮುಶ್ಪಿಕರ್ ರಹೀಂ 79, ಶಕೀಬ್ ಅಲ್ ಹಸನ್ 10 ಶಬ್ಬೀರ್ ರೆಹಮಾನ್ 24 ರನ್ ಗಳಿಸಿದ್ದಾರೆ. ಇನ್ನು ಪ್ಲಂಕೆಟ್ ಇಂಗ್ಲೆಂಡ್ ಪರ 4 ವಿಕೆಟ್ ಪಡೆದಿದ್ದಾರೆ.
ಇಂಗ್ಲೆಂಡ್ ಪರ ಬ್ಯಾಟಿಂಗ್ ನಲ್ಲಿ ರಾಯ್ 1, ಹ್ಯಾಲ್ಸ್ 95, ಜೋ ರೂಟ್ ಅಜೇಯ 133 ಹಾಗೂ ಇವೊಯಿನ್ ಮಾರ್ಗನ್ ಅಜೇಯ 75 ರನ್ ಗಳಿಸಿದ್ದಾರೆ.