ಪಾಕಿಸ್ತಾನ ಸೋಲಿಸುವುದು ಪವಿತ್ರ ಗಂಗೆಯಲ್ಲಿ ಪಾಪ ತೊಳೆಯುವುದು ಒಂದೇ: ಸಿಧು

ಪಾಕಿಸ್ತಾನವನ್ನು ಸೋಲಿಸುವುದು ಪವಿತ್ರ ಗಂಗೆಯಲ್ಲಿ ಪಾಪ ತೊಳೆಯುವುದು ಎರಡೂ ಒಂದೇ ಎಂದು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು...
ಭಾರತದ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು
ಭಾರತದ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು
ಅಮೃತಸರ: ಪಾಕಿಸ್ತಾನವನ್ನು ಸೋಲಿಸುವುದು ಪವಿತ್ರ ಗಂಗೆಯಲ್ಲಿ ಪಾಪ ತೊಳೆಯುವುದು ಎರಡೂ ಒಂದೇ ಎಂದು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಭಾನುವಾರ ಹೇಳಿದ್ದಾರೆ. 
ಲಂಡನ್ ನ ಬರ್ಮಿಂಗ್ ಹ್ಯಾಮ್ ನಲ್ಲಿಂದು ಭಾರತ-ಪಾಕಿಸ್ತಾನದ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನವನ್ನು ಸೋಲಿಸುವುದು ದೊಡ್ಡ ಹೆಮ್ಮೆ. ಪಾಕಿಸ್ತಾನವನ್ನು ಸೋಲಿಸುವುದು ಪವಿತ್ರ ಗಂಗೆಯಲ್ಲಿ ಪಾಪ ತೊಳೆಯುವುದು ಒಂದೇ. ಭಾರತ ತಂಡಕ್ಕೆ ಈ ಮೂಲಕ ಗೆಲವು ಸಾಧಿಸುವಂತೆ ಹಾರೇಸುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿದ್ದೇ ಆದರೆ, ಅದು ನಮ್ಮೆಲ್ಲರ ದೊಡ್ಡ ಹೆಮ್ಮೆ ಎಂದು ಹೇಳಿದ್ದಾರೆ. 
ಹಾಲಿ ಚಾಂಪಿಯನ್ ಭಾರತ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿ 'ಬಿ" ಗುಂಪಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಶುಭಾರಂಭ ಮಾಡಿ, ಮೈದಾನದಾಚೆಯ ವಿವಾದಗಳಿಗೆ ತೆರೆ ಎಳೆಯಲು ತಹತಹಿಸುತ್ತಿದೆ. ಈ ಪಂದ್ಯಾವಳಿಯ ಬಹುನಿರೀಕ್ಷಿತ ಪಂದ್ಯಕ್ಕೆ ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ಕ್ರೀಡಾಂಗಣ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಭಾರತದ ದಿಗ್ಗಜ ಬ್ಯಾಟಿಂಗ್ ಪಡೆ ಹಾಗೂ ಪಾಕಿಸ್ತಾನದ ಅತ್ಯುತ್ತಮ ಬೌಲಿಂಗ್ ಪಡೆ ಎದುರಿನ ಪೈಪೋಟಿಗೆ ಸಾಕ್ಷಿಯಾಗಲು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಾತರಿಸುತ್ತಿದ್ದಾರೆ. 
ಪ್ರಮುಖವಾಗಿ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರೆನಿಸಿರುವ ವಿರಾಟ್ ಕೊಹ್ಲಿ ಹಾಗೂ ಪ್ರತಿಭಾವಂತ ವೇಗಿ ಮೊಹಮ್ಮದ್ ಅಮೀರ್ ನಡುವಿನ ಕಾಳಗ ಎಲ್ಲರ ಕುತೂಹಲವನ್ನು ಕೆರಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com