ಚಾಂಪಿಯನ್ಸ್ ಟ್ರೋಫಿ: ಭಾರತದ ಎಲ್ಲಾ ಪಂದ್ಯಗಳನ್ನು ವೀಕ್ಷಿಸಲು ಬರುತ್ತೇನೆ- ವಿಜಯ್ ಮಲ್ಯ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೀಕ್ಷಣೆಗೆ ಬಂದಿದ್ದ ನನಗೆ ಮಾಧ್ಯಮಗಳು ಹೆಚ್ಚು ಪ್ರಚಾರವನ್ನು ನೀಡಿದ್ದು ಭಾರತದ
ವಿಜಯ್ ಮಲ್ಯ
ವಿಜಯ್ ಮಲ್ಯ
Updated on: 
ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೀಕ್ಷಣೆಗೆ ಬಂದಿದ್ದ ನನಗೆ ಮಾಧ್ಯಮಗಳು ಹೆಚ್ಚು ಪ್ರಚಾರವನ್ನು ನೀಡಿದ್ದು ಭಾರತದ ಇನ್ನುಳಿದ ಪಂದ್ಯಗಳಿಗೂ ಬರುವುದಾಗಿ ಮದ್ಯದ ದೊರೆ ವಿಜಯ್ ಮಲ್ಲ ಟ್ವೀಟ್ ಮಾಡಿದ್ದಾರೆ. 
ಇಂಗ್ಲೆಂಡ್ ನಲ್ಲಿ ಬೀಡು ಬಿಟ್ಟಿರುವ ವಿಜಯ್ ಮಲ್ಯ ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಾಕಿಸ್ತಾನ ಮತ್ತು ಭಾರತ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ವಿಐಪಿ ಸ್ಟ್ಯಾಂಡ್ ನಲ್ಲಿ ಕುಳಿತು ವೀಕ್ಷಿಸಿದ್ದರು. ಮಲ್ಯ ಪಂದ್ಯ ವೀಕ್ಷಣೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. 
ಇನ್ನು ಮಾಧ್ಯಮಗಳು ಸಹ ಮಲ್ಯ ಫೋಟೋವನ್ನು ಹಲವು ತೋರಿಸುತ್ತಿದ್ದವು ಇದಕ್ಕೆ ಟ್ವೀಟಿಸಿರುವ ಮಲ್ಯ ಅವರು ಭಾರತ-ಪಾಕ್ ವೀಕ್ಷಿಸಲು ಬಂದಿದ್ದ ನನಗೆ ಮಾಧ್ಯಮಗಳು ಭಾರೀ ಪ್ರಚಾರವನ್ನು ಕೊಟ್ಟಿದೆ. ಹೀಗಾಗಿ ನಾನು ಮುಂದಿನ ಭಾರತದ ಎಲ್ಲಾ ಪಂದ್ಯಗಳನ್ನು ವೀಕ್ಷಿಸಲು ಬರುತ್ತೇನೆ ಎಂದು ಹೇಳಿದ್ದಾರೆ. 
ವಿಜಯ್ ಮಲ್ಯ ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿದ್ದರು. ಕಳೆದ ಏಪ್ರಿಲ್ ನಲ್ಲಿ ಬ್ರಿಟಿಷ್ ಅಧಿಕಾರಿಗಳು ಮಲ್ಯ ಅವರನ್ನು ಬಂಧಿಸಿತ್ತು. ಇದನ್ನೇ ಇಟ್ಟುಕೊಂಡು ಮಾಧ್ಯಮಗಳು ಮಲ್ಯ ಅವರನ್ನು ಇಂಗ್ಲೆಂಡ್ ನಿಂದ ಗಡಿಪಾರು ಮಾಡುತ್ತಾರೆ ಎಂದು ಸುದ್ದಿಗಳನ್ನು ಬಿತ್ತಿರಿಸಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com