ಪ್ರತಿಷ್ಠಿತ ಪಂದ್ಯ ಎನ್ನುವುದಕ್ಕಿಂತ ಒಳ್ಳೆಯ ಅವಕಾಶ ಎಂದುಕೊಳ್ಳಿ: ಬಾಂಗ್ಲಾ ಕ್ರಿಕೆಟ್ ತಂಡಕ್ಕೆ ಕೋಚ್ ಕಿವಿಮಾತು

ಭಾರತ-ಬಾಂಗ್ಲಾದೇಶ ನಡುವೆ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ಸ್ ಪಂದ್ಯ ನಡೆಯಲಿದ್ದು, ಪಂದ್ಯವನ್ನು ಕೇವಲ ಪ್ರತಿಷ್ಠೆಯ ವಿಷಯವನ್ನಾಗಿಸಿಕೊಳ್ಳದೇ ಉತ್ತಮ ಅವಕಾಶ ಎಂದುಕೊಳ್ಳುವಂತೆ....
ಪ್ರತಿಷ್ಠಿತ ಪಂದ್ಯ ಎನ್ನುವುದಕ್ಕಿಂತ ಒಳ್ಳೆಯ ಅವಕಾಶ ಎಂದುಕೊಳ್ಳಿ: ಬಾಂಗ್ಲಾ ಕ್ರಿಕೆಟ್ ತಂಡಕ್ಕೆ ಕೋಚ್ ಕಿವಿಮಾತು
ಬರ್ಮಿಂಗ್ ಹ್ಯಾಮ್: ಭಾರತ-ಬಾಂಗ್ಲಾದೇಶ ನಡುವೆ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ಸ್ ಪಂದ್ಯ ನಡೆಯಲಿದ್ದು, ಪಂದ್ಯವನ್ನು ಕೇವಲ ಪ್ರತಿಷ್ಠೆಯ ವಿಷಯವನ್ನಾಗಿಸಿಕೊಳ್ಳದೇ ಉತ್ತಮ ಅವಕಾಶ ಎಂದುಕೊಳ್ಳುವಂತೆ ಬಾಂಗ್ಲಾ ತಂಡದ ಕೋಚ್ ಯುಸಿ ಹತುರುಸಿಂಗ ತಂಡಕ್ಕೆ ಕಿವಿಮಾತು ಹೇಳಿದ್ದಾರೆ. 
ಸೆಮಿಫೈನಲ್ಸ್ ಎಂಬುದು ಪ್ರತಿಷ್ಠೆಯ ಪಂದ್ಯವಲ್ಲ ಬದಲಾಗಿ ಅತ್ಯುತ್ತಮ ಅವಕಾಶ ಎಂದು ಪರಿಗಣಿಸಿದರೆ ನಮಗೆ ಒಳಿತಾಗಲಿದೆ, ಯಾವುದೇ ಕ್ರಿಕೆಟಿಗನೂ ಸಹ ಅವಕಾಶವನ್ನು ಸೂಕ್ತವಾಗಿ ಉಪಯೋಗಿಸಿಕೊಂಡು ಬೆಳೆಯುತ್ತಾನೆ ಎಂದು ಹತುರುಸಿಂಗ ಅಭಿಪ್ರಾಯಪಟ್ಟಿದ್ದಾರೆ. 
ಹಿರಿಯರಿರಲಿ, ಕಿರಿಯರಿರಲಿ, ಅವಕಾಶವನ್ನು ಬಳಕೆ ಮಾಡಿಕೊಳ್ಳಿ ಎಂಬುದು ನನ್ನ ಸಲಹೆ ಎಂದು ಬಾಂಗ್ಲಾದೇಶದ ಕ್ರಿಕೆಟ್ ತಂಡದ ಅಭ್ಯಾಸದ ನಂತರ ಹತುರುಸಿಂಗ ಹೇಳಿದ್ದಾರೆ. ಭಾರತದ ವಿರುದ್ಧ ಪಂದ್ಯವಿದ್ದಾಗ ಬಾಂಗ್ಲಾ ಮಾಧ್ಯಮಗಳಿಗೆ ಹಾಗೂ ಅಭಿಮಾನಿಗಳಿಗೆ ಪಂದ್ಯಕ್ಕಿಂತ ಮಿಗಿಲಾದದ್ದು ಏನೋ ಇರುತ್ತದೆ. 
ಯಾವುದೇ ಬಾಂಗ್ಲಾದೇಶಿಯನ್ನು ಕೇಳಿ 2015ರ ವಿಶ್ವಕಪ್ ಫೈನಲ್ಸ್ ನಲ್ಲಿ ರೋಹಿತ್ ಶರ್ಮಾ ಅವರನ್ನು ಔಟ್ ಎಂದು ಘೋಷಿಸದೇ ಇದ್ದದ್ದು ಷಡ್ಯಂತ್ರ ಎಂದೇ ಹೇಳುತ್ತಾರೆ. ಇದೇ ವೇಳೆ ಮೋಕಾ ಮೌಕಾ ಮೌಕಾ ಜಾಹೀರಾತಿಗೆ ಬಾಂಗ್ಲಾ ತಂಡ ಸೇಡು ತೀರಿಸಿಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಬಾಂಗ್ಲಾ ಕ್ರಿಕೆಟ್ ಕೋಚ್ ಸೇಡು ತೀರಿಸಿಕೊಳ್ಳುವ ಮನೋಭಾವನೆ ಇಲ್ಲ. ಅತ್ಯುತ್ತಮ ಎದುರಾಳಿಯಾಗಿರುವ ಭಾರತದ ವಿರುದ್ಧದ ಪಂದ್ಯವನ್ನು ಅತ್ಯುತ್ತಮವಾಗಿ ಆಡಿ ಗೆಲುವು ಸಾಧಿಸುವುದು ಮುಖ್ಯ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com