ಪಾಕ್ ಕ್ರಿಕೆಟಿಗ 6 ಎಸೆತದಲ್ಲಿ 6 ಸಿಕ್ಸರ್ ಸಿಡಿಸಿದರೂ ಯುವಿ ದಾಖಲೆ ಮುರಿಯಲಾಗಲಿಲ್ಲ ಏಕೆ?

ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಮಿಸ್ಬಾ ಉಲ್ ಹಕ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿಯೂ ಭಾರತದ ಯುವರಾಜ್ ಸಿಂಗ್ ಹೆಸರಲ್ಲಿರುವ ದಾಖಲೆಯನ್ನು ಮುರಿಯುವಲ್ಲಿ ವಿಫಲರಾಗಿದ್ದಾರೆ.
ಮಿಸ್ಬಾ ಉಲ್ ಹಕ್ ಸಿಡಿಸಿದ ಆರು ಸಿಕ್ಸರ್
ಮಿಸ್ಬಾ ಉಲ್ ಹಕ್ ಸಿಡಿಸಿದ ಆರು ಸಿಕ್ಸರ್

ನವದೆಹಲಿ: ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಮಿಸ್ಬಾ ಉಲ್ ಹಕ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿಯೂ ಭಾರತದ ಯುವರಾಜ್ ಸಿಂಗ್ ಹೆಸರಲ್ಲಿರುವ ದಾಖಲೆಯನ್ನು ಮುರಿಯುವಲ್ಲಿ ವಿಫಲರಾಗಿದ್ದಾರೆ.

ಹಾಂಗ್ ಕಾಂಗ್ ನಲ್ಲಿ ನಡೆಯುತ್ತಿರುವ ಹಾಂಗ್'ಕಾಂಗ್ ಟಿ20 ಬ್ಲಿಟ್ಜ್ ಟೂರ್ನಿಯಲ್ಲಿ ಹಾಂಗ್ ಕಾಂಗ್ ಐ ಲ್ಯಾಂಡ್ ಯುನೈಟೆಡ್ ತಂಡವನ್ನು ಪ್ರತಿನಿಧಿಸುತ್ತಿರುವ ಮಿಸ್ಬಾ, ಹಂಗ್ ಹೋಂ ಜಾಗ್ವಾರ್ ವಿರುದ್ಧದ ಪಂದ್ಯದಲ್ಲಿ ಆರು  ಎಸೆತದಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. ಆದರೆ ಯುವರಾಜ್ ಸಿಂಗ್ ಹೆಸರಲ್ಲಿರುವ ಈ ದಾಖಲೆಯನ್ನು ಮುರಿಯುವಲ್ಲಿ ಮಿಸ್ಬಾ ವಿಫಲರಾಗಿದ್ದಾರೆ.

ಹೌದು..ಮಿಸ್ಬಾ ಉಲ್ ಹಕ್ 6 ಎಸೆತಗಳಲ್ಲಿ ಸತತ 6 ಸಿಕ್ಸರ್ ಸಿಡಿಸಿದ್ದಾರೆಯಾದರೂ ಅದು ಒಂದು ಓವರ್ ನಲ್ಲಿ ಅಲ್ಲ. ಬದಲಿಗೆ 2 ಓವರ್ ಗಳಲ್ಲಿ. 18.5ನೇ ಎಸೆತವನ್ನು ಸಿಕ್ಸರ್ ಗೆ ಅಟ್ಟಿದ ಮಿಸ್ಬಾ 18.6 ನೇ ಎತೆಸವನ್ನೂ ಕೂಡ ಸಿಕ್ಸರ್ ಗೆ ಅಟ್ಟಿದರು. ಬಳಿಕ 20ನೇ ಓವರ್ ಮೊದಲ ಎಸೆತ (19.1)ದಲ್ಲಿ ಸಯ್ಯೀದ್ ಸಿಂಗಲ್ ಪಡೆಯುವುದರೊಂದಿಗೆ ಮತ್ತೆ ಕ್ರೀಸ್ ಗೆ ಆಗಮಿಸಿದ ಮಿಸ್ಬಾ ಅಂತಿಮ ಎರಡನೇ ಎಸೆತದಿಂದ ಐದನೇ ಎಸೆತದವರೆಗಿನ 4 ಎಸೆತಗಳನ್ನು ಆರು ಸಿಕ್ಸರ್ ಗೆ ಅಟ್ಟಿದರು.

ಮಿಸ್ಬಾ (82 ರನ್ ಗಳು) ಅವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹಾಂಗ್ ಕಾಂಗ್ ಐ ಲ್ಯಾಂಡ್ ಯುನೈಟೆಡ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216  ರನ್ ಕಲೆಹಾಕಿತು. ಇದಕ್ಕೆ ಪ್ರತ್ಯುತ್ತರವಾಗಿ ಹಂಗ್ ಹೋಂ ಜಾಗ್ವಾರ್ ತಂಡ 8 ವಿಕೆಟ್ ಕಳೆದುಕೊಂಡು 183 ರನ್ ಗಳಿಸಲಷ್ಟೇ ಶಕ್ತವಾಯಿತು.

ಕ್ರಿಕೆಟ್ ವೃತ್ತಿಜೀವನದ ಅಂತಿಮ ಘಟ್ಟದಲ್ಲಿರುವ ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಮಿಸ್ಬಾ-ಉಲ್-ಹಕ್ ತಮ್ಮಲ್ಲಿ ಇನ್ನೂ ಸ್ಫೋಟಕ ಬ್ಯಾಟಿಂಗ್ ನಡೆಸುವ ಸಾಮರ್ಥ್ಯವಿದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್ ಓವರ್ ನಲ್ಲಿ ಆರು ಎಸೆತದಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com