ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ ವಿರುದ್ಧ ಆಸ್ಟ್ರೇಲಿಯಾ ಪತ್ರಿಕೆಗಳ ತಗಾದೆ

ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪ್ರಧಾನ ಕೋಚ್ ಅನಿಲ್ ಕುಂಬ್ಳೆ ವಿರುದ್ಧ ಆಸ್ಟ್ರೇಲಿಯಾದ ದಿ ಡೇಲಿ ಟೆಲಿಗ್ರಾಫ್ ಪತ್ರಿಕೆ ಗಂಭೀರ ಆರೋಪ...
ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ
ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ
Updated on
ನವದೆಹಲಿ: ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪ್ರಧಾನ ಕೋಚ್ ಅನಿಲ್ ಕುಂಬ್ಳೆ ವಿರುದ್ಧ ಆಸ್ಟ್ರೇಲಿಯಾದ ದಿ ಡೇಲಿ ಟೆಲಿಗ್ರಾಫ್ ಪತ್ರಿಕೆ ಗಂಭೀರ ಆರೋಪ ಮಾಡಿದ್ದು ಇದು ಉಭಯ ತಂಡಗಳ ನಡುವಿನ ಸಂಬಂಧ ಇನ್ನಷ್ಟು ಹಾಳಾಗುವ ಸಾಧ್ಯತೆ ಇದೆ. 
ವಿರಾಟ್ ಕೊಹ್ಲಿ ಪಂದ್ಯದ ವೇಳೆ ಆಸೀಸ್ ಸಿಬ್ಬಂದಿಯತ್ತ ಎನರ್ಜಿ ಡ್ರಿಂಕ್ ನ ಬಾಟಲ್ ಅನ್ನು ಎಸೆದಿದ್ದರೂ, ಆಸ್ಟ್ರೇಲಿಯಾದ ಬದ್ಧತೆ ಪ್ರಶ್ನಿಸುವ ಭಾರತದ ನಿರ್ಲಜ್ಜ ಅಭಿಯಾನಕ್ಕೆ ಕೊಹ್ಲಿ ಸೂತ್ರಧಾರರಾಗಿದ್ದಾರೆ. ಇನ್ನು ಮಂಕಿಗೇಟ್ ಪ್ರಕರಣಕ್ಕೆ ಪ್ರಚೋದನೆ ನೀಡಿದ ಪ್ರಮುಖ ವ್ಯಕ್ತಿ ಕುಂಬ್ಳೆ, ಮತ್ತೊಮ್ಮೆ ತೆರೆಯ ಹಿಂದೆ ನಿಂತು ಗೊಂಬೆ ಆಡಿಸುವ ಕೆಲಸವನ್ನು ಸಂಪಾದಿಸಿದಂತೆ ಕಾಣುತ್ತಿದೆ ಎಂದು ಪತ್ರಿಕೆ ವರದಿ ಮಾಡಿದೆ. 
ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಡಿಆರ್ಎಸ್ ಚೀಟ್ ಗೇಟ್ ಪ್ರಕರಣದಲ್ಲಿ ಉಭಯ ಕ್ರಿಕೆಟ್ ಸಂಸ್ಥೆಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿ ರಾಜಿ ಒಪ್ಪಂದಕ್ಕೆ ಬಂದ ಬೆನ್ನಲ್ಲೇ ಆಸೀಸ್ ಮಾಧ್ಯಮಗಳು ಮತ್ತೆ ತಗಾದೆ ತೆಗೆದಿದ್ದು ಇದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅನ್ನು ಕೆರಳಿಸಿದೆ. 
ಸ್ಮಿತ್ ಹಾಗೂ ಹ್ಯಾಂಡ್ಸ್ ಕೂಂಬ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಐಸಿಸಿಗೆ ಬಿಸಿಸಿಐ ದೂರು ಸಲ್ಲಿಸಿತ್ತು. ಬಳಿಕ ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳ ಸಿಇಒ ಗುರುವಾರ ಮುಂಬೈನಲ್ಲಿ ಚರ್ಚೆ ನಡೆಸಿ ಪ್ರಕರಣಕ್ಕೆ ಕೊನೆ ಹಾಡಲು ತೀರ್ಮಾನಿಸಿದ್ದರಿಂದ ಬಿಸಿಸಿಐ ತನ್ನ ದೂರನ್ನು ಹಿಂಪಡೆದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com