ನವದೆಹಲಿ: ಇಂಡಿಯನ್ ಪ್ರಿಮಿಯಲ್ ಲೀಗ್(ಐಪಿಎಲ್) 10ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ವಿಷಯವನ್ನು ಕಿಂಗ್ಸ್ ಫ್ರಾಂಚೈಸಿ ಟ್ವೀಟರ್ ಮೂಲಕ ಖಚಿತಪಡಿಸಿದೆ.
ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ 2015ರಲ್ಲಿ ತಂಡದ ನಾಯಕರಾಗಿದ್ದರೂ, ಟೂರ್ನಿಯ ಮಧ್ಯದಲ್ಲಿಯೇ ಮುರಳಿ ವಿಜಯ್ ಸಾರಥ್ಯ ವಹಿಸಿಕೊಂಡಿದ್ದರು. ಆದರೆ ಇದರಿಂದ ತಂಡದ ಅದೃಷ್ಟ ಬದಲಾಗಿರಲಿಲ್ಲ. ಸತತ 2ನೇ ಆವೃತ್ತಿಯಲ್ಲೂ ಪಂಜಾಬ್ ಕೊನೆಯ ಸ್ಥಾನ ಪಡೆದಿತ್ತು.