ರಾಂಚಿ ಟೆಸ್ಟ್: 2ನೇ ದಿನದಾಟಕ್ಕೆ ಭಾರತ 120/1, ರಾಹುಲ್ ಅರ್ಧ ಶತಕ

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಟೀಂ ಇಂಡಿಯಾ 1 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ...
ಮುರುಳಿ ವಿಜಯ್- ಚೇತೇಶ್ವರ್ ಪುಜಾರ
ಮುರುಳಿ ವಿಜಯ್- ಚೇತೇಶ್ವರ್ ಪುಜಾರ
ರಾಂಚಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಟೀಂ ಇಂಡಿಯಾ 1 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ. 
ರಾಂಚಿಯ ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದ ಎರಡನೇ ದಿನದಾಟಕ್ಕೆ ಭಾರತ 1 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದ್ದು ಮುನ್ನಡೆ ಪಡೆಯಲು ಇನ್ನು 331 ರನ್ ಗಳಿಸಬೇಕಿದೆ. ಭಾರತ ಪರ ಕೆಎಲ್ ರಾಹುಲ್ 67, ಆಕರ್ಷಕ ಅರ್ಧ ಶತಕ ಸಿಡಿಸಿ ಔಟಾಗಿದ್ದಾರೆ. ಇನ್ನು ಆರಂಭಿಕ ಆಟಗಾರ ಮುರುಳಿ ವಿಜಯ್ ಅಜೇಯ 42 ಮತ್ತು ಚೇತೇಶ್ವರ ಪೂಜಾರ ಅಜೇಯ 10 ರನ್ ಗಳಿಸಿದ್ದು ಮೂರನೇ ದಿನದಾಟ ಪ್ರಾರಂಭಿಸಲಿದ್ದಾರೆ. 
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 451 ರನ್ ಗಳಿಗೆ ಆಲೌಟ್ ಆಯಿತು.  ಡೇವಿಡ್‌ ವಾರ್ನರ್‌(19) ಹಾಗೂ ಮ್ಯಾಟ್‌ ರೆನ್ಶಾ(44) ಅರ್ಧ ಶತಕದ ಜೊತೆಯಾಟ ನೀಡಿದರು. ವಾರ್ನರ್‌ ವಿಕೆಟ್‌ ಒಪ್ಪಿಸಿದ ಬಳಿಕ ಕಣಕ್ಕಿಳಿದ ನಾಯಕ ಸ್ವೀವನ್‌ ಸ್ಮಿತ್‌ ನಾಯಕನ ಆಟವಾಡಿ ಅಜೇಯ 178 ರನ್ ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ 104 ರನ್ ಗಳಿಸಿದ್ದು ಆಸೀಸ್ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು. 
ಭಾರತ ಪರ ರವೀಂದ್ರ ಜಡೇಜಾ 5, ಉಮೇಶ್ ಯಾವದ್ 3 ಮತ್ತು ಆರ್ ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com