ಧೋನಿ ತವರಿನಲ್ಲಿ ಧೋನಿಯಂತೆ ಅದ್ಭುತವಾಗಿ ರನ್ ಔಟ್ ಮಾಡಿದ ಜಡೇಜಾ

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹಿಂಬದಿಯಿಂದ ವಿಕೆಟ್ ಚೆಂಡು ಎಸೆದು ರನ್ ಔಟ್ ಮಾಡುವ ಕಲೆ ಕರಗತವಾಗಿದ್ದು ಇದೀಗ ಅದೇ ರೀತಿಯ ರನ್ ಔಟ್...
ರವೀಂದ್ರ ಜಡೇಜಾ
ರವೀಂದ್ರ ಜಡೇಜಾ
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹಿಂಬದಿಯಿಂದ ವಿಕೆಟ್ ಚೆಂಡು ಎಸೆದು ರನ್ ಔಟ್ ಮಾಡುವ ಕಲೆ ಕರಗತವಾಗಿದ್ದು ಇದೀಗ ಅದೇ ರೀತಿಯ ರನ್ ಔಟ್ ವೊಂದನ್ನು ಸ್ಪಿನ್ನರ್ ರವೀಂದ್ರ ಜಡೇಜಾ ಮಾಡಿದ್ದಾರೆ. 
ರಾಂಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಆಸೀಸ್ ಆಟಗಾರ ಜಾಸ್ ಹಸಲ್ವುಡ್ ರನ್ನು ಹಿಂಬದಿಯಿಂದ ಚೆಂಡನ್ನು ವಿಕೆಟ್ ಗೆ ಹೊಡೆಯುವ ಮೂಲಕ ರನ್ ಔಟ್ ಮಾಡಿದ್ದಾರೆ. 
ಟೀಂ ಇಂಡಿಯಾದಲ್ಲಿ ಸದ್ಯ ಜಡೇಜಾ ಅದ್ಭುತವಾಗಿ ಫಿಲ್ಡೀಂಗ್ ಮಾಡುತ್ತಿದ್ದಾರೆ. ಜಡೇಜಾ ಎಸೆತವನ್ನು ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಎರಡು ರನ್ ಪಡೆಯಲು ಮುಂದಾದರು ಈ ವೇಳೆ ಫಿಲ್ಢರ್ ಚೆಂಡನ್ನು ನೇರವಾಗಿ ರವೀಂದ್ರ ಜಡೇಜಾರ ಕೈಗೆ ಎಸೆದಿದ್ದಾನೆ. ಈ ವೇಳೆ ಜಡೇಜಾ ಹಿಂಬದಿಯಿಂದ ವಿಕೆಟ್ ಅನ್ನು ನೋಡದೇ ಚೆಂಡನ್ನು ಹೊಡೆದು ಅದ್ಭುತವಾಗಿ ಔಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com