ಕೊಹ್ಲಿ ಗಾಯ ಕುರಿತು ಟೀಕೆ: ಕ್ಷಮೆ ಕೋರಿ ಆಸೀಸ್ ಮಾಜಿ ಆಟಗಾರ ಬ್ರಾಡ್ ಹಾಡ್ಜ್ ಟ್ವೀಟ್

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಲ್ಲಿ ಆಡುವ ಉದ್ದೇಶದಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಿಂದ...
ಬ್ರಾಡ್ ಹಾಡ್ಜ್-ವಿರಾಟ್ ಕೊಹ್ಲಿ
ಬ್ರಾಡ್ ಹಾಡ್ಜ್-ವಿರಾಟ್ ಕೊಹ್ಲಿ
ಮೆಲ್ಬೋರ್ನ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಲ್ಲಿ ಆಡುವ ಉದ್ದೇಶದಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಿದ್ದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಡ್ಜ್ ಇದೀಗ ಕೊಹ್ಲಿಯನ್ನು ಕ್ಷಮೆ ಕೋರಿದ್ದಾರೆ. 
ಕೊಹ್ಲಿ ವಿರುದ್ಧ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಹಾಡ್ಜ್ ಗೆ ಕ್ರಿಕೆಟ್ ವಲಯ ಹಾಗೂ ಭಾರತೀಯ ಅಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಮುಂದಿನ ತಿಂಗಳು ಆರಂಭವಾಗಲಿರುವ ಐಪಿಎಲ್ ನಲ್ಲಿ ಗುಜರಾತ್ ಲಯನ್ಸ್ ಕೋಚ್ ಆಗಿ ಮುಂದುವರಿಯುವ ಅವರ ಸ್ಥಾನಕ್ಕೆ ಧಕ್ಕೆಯಾಗುವ ಸಾಧ್ಯತೆಯನ್ನು ಅಂದಾಜಿಸಿದ ಅವರು ತಮ್ಮ ಟ್ವೀಟರ್ ನಲ್ಲಿ ಕೊಹ್ಲಿಯನ್ನು ಕ್ಷಮೆ ಕೋರಿದ್ದಾರೆ. 
ಕೊಹ್ಲಿ ಕುರಿತಾದ ಹೇಳಿಕೆಗೆ ಸಂಬಂಧಿಸಿದಂತೆ  ಕ್ರಿಕೆಟ್ ಅಭಿಮಾನಿಗಳು, ಭಾರತ ತಂಡದ ಹಾಗೂ ವಿಶೇಷವಾಗಿ ವಿರಾಟ್ ಕೊಹ್ಲಿ ಅವರಲ್ಲಿ ಕ್ಷಮೆ ಕೋರುತ್ತೇನೆ. ನನ್ನ ಪ್ರತಿಕ್ರಿಯೆಯ ಉದ್ದೇಶ ಯಾರನ್ನೂ ನೋಯಿಸುವುದಾಗಿರಲಿಲ್ಲ. ಐಪಿಎಲ್ ಗೆ ನನ್ನಲ್ಲಿ ವಿಶೇಷ ಗೌರವವಿದ್ದು, ಲಘು ದಾಟಿಯಲ್ಲಿ ಪ್ರತಿಕ್ರಿಯೆಸಿದ್ದೆ ಅಷ್ಟೇ. ವಿರಾಟ್ ಕೊಹ್ಲಿ ಬಗ್ಗೆ ಸಾಕಷ್ಟು ಅವಸ್ಮರಣೀಯ ಗಳಿಗೆಗಳನ್ನು ನೀಡಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com