ಕ್ರಿಕ್ ಇನ್ಫೋ ಚಿತ್ರ
ಕ್ರಿಕ್ ಇನ್ಫೋ ಚಿತ್ರ

ಐಪಿಎಲ್ 2017: ಮುಂಬೈ ಬಗ್ಗುಬಡಿದ ಪುಣೆ ಫೈನಲ್ ಗೆ

ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ 2017ನೇ ಸರಣಿಯ ಪ್ಲೇ-ಆಫ್‌ ನ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಪುಣೆ ತಂಡ 20 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಮುಂಬೈ: ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ 2017ನೇ ಸರಣಿಯ ಪ್ಲೇ-ಆಫ್‌ ನ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಪುಣೆ ತಂಡ 20 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಮಂಗಳವಾರ ಮುಂಬೈ ವಾಂಖೆಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪುಣೆ ನೀಡಿದ್ದ 163 ರನ್ ಗಳ ಬೆನ್ನಟ್ಟಿದ ಮುಂಬೈ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ  ಪುಣೆ ವಿರುದ್ಧ 20 ರನ್ ಗಳ ಸೋಲು ಕಂಡಿತು. ತವರಿನ ಅಂಗಳದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪುಣೆ ತಂಡ  ಆರಂಭಿಕ ಆಘಾತದ ಹೊರತಾಗಿಯೂ ಅಜಿಂಕ್ಯಾ ರಹಾನೆ (56 ರನ್) ಹಾಗೂ ತಿವಾರಿ (58 ರನ್) ಅವರ ಆಕರ್ಷಕ ಅರ್ಧಶತಕ ಹಾಗೂ ಎಂಎಸ್ ಧೋನಿ (40 ರನ್)ಸಮಯೋಚಿತ ಅಜೇಯ ಆಟದ ನೆರವಿನಿಂದ ನಿಗದಿತ 20 ಓವರ್  ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳ ಗಳಿಸಿತು.

ಮುಂಬೈ ಪರ ಮೆಕ್ ಲೀನಘನ್, ಮಲಿಂಗಾ ಹಾಗೂ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

ಪುಣೆ ನೀಡಿದ 163 ರನ್ ಗಳ ಸವಾಲಿನ ಗುರಿಯನ್ನು ಬೆನ್ನ ಹತ್ತಿದ ಮುಂಬೈ ತಂಡಕ್ಕೆ ಪುಣೆಯ ವಾಷಿಂಗ್ಟನ್ ಸುಂದರ್ ಹಾಗೂ ಠಾಕೂರ್ ಅಕ್ಷರಶಃ ಮಾರಕವಾಗಿ ಕಾಡಿದರು. ಇಬ್ಬರೂ ಬೌಲರ್ ಗಳ ತಲಾ 3 ವಿಕೆಟ್ ಪಡೆದು ಪುಣೆ  ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಪ್ರಮುಖವಾಗಿ ವಾಷಿಂಗ್ಟನ್ ಸುಂದರ್ ಒಂದೇ ಓವರ್ ನಲ್ಲಿ ಮುಂಬೈ ನ ಪಾಂಡ್ಯಾ ಹಾಗೂ ಪಟೇಲ್ ವಿಕೆಟೆ ಪಡೆದಿದ್ದು ಮುಂಬೈಗೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿತು.

ವಾಷಿಂಗ್ಟನ್‌ ಸುಂದರ್‌ ಅವರ ಸ್ಪೆಲ್‌ ಪಂದ್ಯಕ್ಕೆ ತಿರುವು ನೀಡಿತು. ಅಪಾಯಕಾರಿ ಬ್ಯಾಟ್ಸ್‌ಮನ್‌ ರೋಹಿತ್‌, ಲಯದಲ್ಲಿದ್ದ ಅಂಬಾಟಿ ರಾಯುಡು ಇಬ್ಬರನ್ನೂ ಪವರ್‌-ಪ್ಲೇ ಮುಕ್ತಾಯಕ್ಕೂ ಮೊದಲೇ ಔಟ್‌ ಮಾಡಿದ ಸುಂದರ್‌, ದೈತ್ಯ  ಪೊಲಾರ್ಡ್‌ರನ್ನು ಕೂಡ ಪೆವಿಲಿಯನ್‌ ಗಟ್ಟಿದರು. ಮೊದಲ ಮೂರು ಓವರ್‌ಗಳಲ್ಲಿ ಕೇವಲ 12 ರನ್‌ ನೀಡಿ 3 ಪ್ರಮುಖ ವಿಕೆಟ್‌ ಕಬಳಿಸಿದ ತಮಿಳುನಾಡು ಸ್ಪಿನ್ನರ್‌, ಪಂದ್ಯದ ಮೇಲೆ ಪುಣೆ ಸಂಪೂರ್ಣ ಹಿಡಿತ ಸಾಧಿಸಲು  ಕಾರಣರಾದರು.

ಅಂತಿಮವಾಗಿ ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಐಪಿಎಲ್‌ 10ನೇ ಆವೃತ್ತಿಯ ಫೈನಲ್‌ಗೆ ಪುಣೆ ಸೂಪರ್‌ಜೈಂಟ್‌ ತಂಡ ಲಗ್ಗೆಯಿಟ್ಟಿದೆ.

Related Stories

No stories found.

Advertisement

X
Kannada Prabha
www.kannadaprabha.com