ಭಾರತ-ಶ್ರೀಲಂಕಾ ನಡುವಣ ಮೊದಲ ಟೆಸ್ಟ್ ರೋಚಕ ಡ್ರಾನಲ್ಲಿ ಅಂತ್ಯ

ಟೀಂ ಇಂಡಿಯಾ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿದೆ...
ಟೀಂ ಇಂಡಿಯಾ
ಟೀಂ ಇಂಡಿಯಾ
ಕೋಲ್ಕತ್ತಾ: ಟೀಂ ಇಂಡಿಯಾ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿದೆ. 
ಕೋಲ್ಕತ್ತಾದ ಈಡೆನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಐದನೇ ದಿನ ನಿಜಕ್ಕೂ ಹಲವು ರೋಚಕಗಳಿಗೆ ಸಾಕ್ಷಿಯಾಯಿತು. ಶ್ರೀಲಂಕಾಗೆ ಗೆಲುವಿಗಾಗಿ 26.3 ಎಸೆತಗಳಲ್ಲಿ 231 ರನ್ ಗಳನ್ನು ನೀಡಲಾಗಿತ್ತು. ಮೊದಲಿಗೆ ಪಂದ್ಯ ಡ್ರಾ ಆಗುವುದಿತ್ತು. ಆದರೆ ಟೀಂ ಇಂಡಿಯಾ ವೇಗಿಗಳ ಮಾರಕ ದಾಳಿಯಿಂದಾಗಿ ಪಂದ್ಯ ಭಾರತದ ಪರ ತಿರುಗಿತು. ಆದರೆ ಮಂದ ಬೆಳಕಿನಿಂದಾಗಿ ಅಂಪೈರ್ ಗಳು ಪಂದ್ಯವನ್ನು ಬೇಗ ನಿಲ್ಲಿಸಿದ್ದರಿಂದ ಮೂರೇ ವಿಕೆಟ್ ಗಳಿಂದ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. 
ಮಳೆಯ ಕಾರಣದಿಂದಾಗಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 172 ರನ್ ಗಳಿಗೆ ಆಲ್ ಔಟ್ ಆಯಿತು. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ ಶ್ರೀಲಂಕಾ 294 ರನ್ ಗಳಿಗೆ ಸರ್ವಪತನ ಕಾಣುವ ಮೂಲಕ 122 ರನ್ ಗಳ ಮುನ್ನಡೆ ಸಾಧಿಸಿತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 352 ರನ್ ಪೇರಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಶ್ರೀಲಂಕಾಗೆ 26.3 ಓವರ್ ಗಳಲ್ಲಿ 231 ರನ್ ಟಾರ್ಗೆಟ್ ನೀಡಲಾಗಿತ್ತು. 
ಟೀಂ ಇಂಡಿಯಾ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್ ನಲ್ಲಿ ಅಜೇಯ 104 ರನ್ ಗಳಿಸಿದರು. ಶಿಖರ್ ಧವನ್ 94, ಕೆಎಲ್ ರಾಹುಲ್ 79 ರನ್ ಗಳಿಸಿದ್ದಾರೆ. 
ಎರಡನೇ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ಆಟಗಾರರು ನಿಧಾನಗತಿಯ ಬ್ಯಾಟಿಂಗ್ ಮಾಡಿದರು. ಲಂಕಾದ ಆರಂಭಿಕರು ವೈಫಲ್ಯ ಕಂಡದರು. ಈ ವೇಳೆ ಚಾಂಡಿಮಲ್ 20, ಡಿಕ್ವೆಲ್ಲಾ 27 ರನ್ ಗಳಿಸಿ ತಂಡ ಸೋಲಿನ ಸುಳಿಯಿಂದ ಪಾರಾಗಲು ನೆರವಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com