ನಾಗ್ಪುರ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ.
ನಾಗ್ಪುರದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ 259 ಎಸೆತಗಳಲ್ಲಿ 15 ಬೌಂಡರಿ 2 ಸಿಕ್ಸರ್ ಸೇರಿದಂತೆ 200 ರನ್ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ ನಾಯಕನಾಗಿ ಟೆಸ್ಟ್ ನಲ್ಲಿ ಅತೀ ಹೆಚ್ಚು ದ್ವಿಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಆಟಗಾರ ಬ್ರಿಯಾನ್ ಲಾರಾ ನಾಯಕರಾಗಿ 5 ಬಾರಿ ದ್ವಿಶತಕ ಸಿಡಿಸಿದ್ದು ಅವರ ದಾಖಲೆಯನ್ನು ಕೊಹ್ಲಿ ಸಮಗಟ್ಟಿದ್ದಾರೆ.
ಇನ್ನು ಟೀಂ ಇಂಡಿಯಾ ಆಟಗಾರನಾಗಿ ದ್ವಿಶತಕ ಸಿಡಿಸಿದ ಮೂರನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ ಮ್ತತು ಸಚಿನ್ ತೆಂಡೂಲ್ಕರ್ 6 ಬಾರಿ ದ್ವಿಶತಕ ಸಿಡಿಸಿದ್ದಾರೆ.