ನಾಗ್ಪುರ: ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಟೆಸ್ಟ್ ನಲ್ಲಿ ವೇಗವಾಗಿ 300 ವಿಕೆಟ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಲಂಕಾದ ಆಟಗಾರ ಘಮಗೆ ಅವರನ್ನು ಬೌಲ್ಡ್ ಮಾಡುವ ಮೂಲಕ 300ನೇ ವಿಕೆಟ್ ಪಡೆದರು. ಅಶ್ವಿನ್ ತಮ್ಮ 54ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಇದಕ್ಕೂ ಮುನ್ನ ವೇಗವಾಗಿ 300 ವಿಕೆಟ್ ಪಡೆದ ದಾಖಲೆ ಆಸ್ಟ್ರೇಲಿಯಾ ವೇಗಿ ಡೇನಿಸ್ ಲಿಲ್ಲೇ ಅವರ ಹೆಸರಿನಲ್ಲಿತ್ತು. ಲಿಲ್ಲೇ ಅವರು 56ನೇ ಟೆಸ್ಟ್ ಪಂದ್ಯದಲ್ಲಿ 300ನೇ ವಿಕೆಟ್ ಪಡೆದರೇ ಶ್ರೀಲಂಕಾದ ಸ್ಪಿನ್ ಬೌಲರ್ ಮುತ್ತಯ್ಯ ಮುರಳಿಧರನ್ 58ನೇ ಪಂದ್ಯದಲ್ಲಿ 300ನೇ ವಿಕೆಟ್ ಪಡೆದಿದ್ದರು.