46 ಆಯ್ತು ನಿವೃತ್ತಿ ತೆಗೆದುಕೊಳ್ಳುತ್ತೀರಾ ಎಂದರೆ 'ಸಾಧ್ಯವೇ ಇಲ್ಲ' ಎಂದ ಆ ಕ್ರಿಕೆಟಿಗ ಯಾರು ಗೊತ್ತಾ?

ಭಾರತದ ಹಿರಿಯ ಕ್ರಿಕೆಟ್ ಆಟಗಾರ ಆಶಿಶ್ ನೆಹ್ರಾರನ್ನೂ ಮೀರಿಸುವ ಓರ್ವ ಆಟಗಾರ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿದ್ದು, ವಯಸ್ಸು 46 ಆಯ್ತು ನಿವೃತ್ತಿ ತೆಗೆದುಕೊಳ್ಳುತ್ತೀರಾ ಎಂದರೆ ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸಿಡ್ನಿ: ಭಾರತದ ಹಿರಿಯ ಕ್ರಿಕೆಟ್ ಆಟಗಾರ ಆಶಿಶ್ ನೆಹ್ರಾರನ್ನೂ ಮೀರಿಸುವ ಓರ್ವ ಆಟಗಾರ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿದ್ದು, ವಯಸ್ಸು 46 ಆಯ್ತು ನಿವೃತ್ತಿ ತೆಗೆದುಕೊಳ್ಳುತ್ತೀರಾ ಎಂದರೆ ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ.
ಇಷ್ಟಕ್ಕೂ ಆ ಕ್ರಿಕೆಟಿಗ ಯಾರು ಗೊತ್ತೇ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್...ಹೌದು ಒಂದು ಕಾಲದಲ್ಲಿ ಆಸ್ಟ್ರೇಲಿಯಾ ತಂಡದ ಸ್ಪಿನ್ ವಿಭಾಗಕ್ಕೆ ಬಲ ತಂದಿದ್ದ ಬ್ರಾಡ್ ಹಾಗ್ ಇನ್ನೂ ನಿವೃತ್ತಿ ತೆಗೆದುಕೊಂಡಿಲ್ಲ  ಎಂಬ ವಿಚಾರ ಬಹುತೇಕ ಕ್ರಿಕೆಟ್ ಪ್ರೇಮಿಗಳಿಗೆ ತಿಳಿದಿಲ್ಲ. ಕಾರಣ ಪ್ರಸ್ತುತ ಬ್ರಾಡ್ ಹಾಗ್ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದೇ ಕಾರಣಕ್ಕೆ ಬ್ರಾಡ್ ಹಾಗ್ ನಿವೃತ್ತಿಯಾಗಿದ್ದಾರೆ ಎಂದೇ ಎಲ್ಲರೂ  ಭಾವಿಸಿದ್ದಾರೆ.

ಆದರೆ ನಿಜಾಂಶವೆಂದರೆ ಈ ಹಿರಿಯ ಕ್ರಿಕೆಟಿಗ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗಿಲ್ಲ. ಪ್ರಮುಖ ವಿಚಾರವೆಂದರೆ ಅವರಿಗೆ 46 ವರ್ಷ ವಯಸ್ಸಿನ ಬ್ರಾಡ್ ಹಾಗ್ ನಿವೃತ್ತಿ ಕಡೆ ಮನಸ್ಸೇ ಮಾಡಿಲ್ಲವಂತೆ. ಪ್ರಸ್ತುತ  ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವಿನ ಸರಣಿಯಲ್ಲಿ ಬ್ರಾಡ್ ಹಾಗ್ ಕಮೆಂಟರಿ ಮಾಡುತ್ತಿದ್ದು, ಸುದ್ದಿಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಬ್ರಾಡ್ ಹಾಗ್ ತಮ್ಮ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.

"ದೇಶಕ್ಕಾಗಿ ಆಡುವುದನ್ನು ನಾನು ಹೆಮ್ಮೆಯಾಗಿ ಭಾವಿಸುತ್ತೇನೆ. ಇದೇ ಕಾರಣಕ್ಕೆ ನಾನು ನಿವೃತ್ತಿ ಬಗ್ಗೆ ಯೋಚಿಸಿಲ್ಲ. ತಾವಿನ್ನೂ ಕ್ರಿಕೆಟ್ ಗೆ ಸಲ್ಲಿಸಬೇಕಾದ ಸೇವೆ ಬಹಳಷ್ಟಿದೆ. ಪ್ರಸ್ತುತ ನಾನು ಪ್ರಥಮ ದರ್ಜೆ ಕ್ರಿಕೆಟ್ ನತ್ತ ಗಮನ  ಕೇಂದ್ರೀಕರಿಸಿದ್ದು, ಪಶ್ಚಿಮ ಆಸ್ಟ್ರೇಲಿಯಾ ತಂಡಕ್ಕೆ ಕಮ್ ಬ್ಯಾಕ್ ಮಾಡಲು ಶ್ರಮಿಸುತ್ತಿದ್ದೇನೆ. ನನ್ನ ವಯಸ್ಸಿಗೂ ನನ್ನ ಆಟಕ್ಕೂ ಸಂಬಂಧವಿಲ್ಲ.. ನಾನು ಇಷ್ಟಪಟ್ಟು ಆಡುತ್ತಿರುವ ಆಟಕ್ಕೆ ನನ್ನ ದೇಹ ಎಂದು ಸಹಕರಿಸುವುದಿಲ್ಲವೋ  ಅಂದು ನಾನು ನಿವೃತ್ತಿ ಬಗ್ಗೆ ಯೋಚಿಸುತ್ತೇನೆ ಎಂದು ಹಾಗ್ ಹೇಳಿದ್ದಾರೆ.

ಬ್ರಾಡ್ ಹಾಗ್ 2014ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಭಾರತದ ಹಿರಿಯ ಆಟಗಾರ ಆಶಿಶ್ ನೆಹ್ರಾ ಕೂಡ ತಮ್ಮ 38ನೇ ವಯಸ್ಸಿನಲ್ಲೂ ಕಮ್ ಬ್ಯಾಕ್ ಮಾಡಿ ಆಸಿಸ್ ವಿರುದ್ಧದ ಟಿ20 ಸರಣಿಗೆ  ಆಯ್ಕೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com