ಮೈಸೂರು: ಮೈಸೂರಿನ ಮಾನಸ ಗಂಗೋತ್ರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಯಲ್ಲಿ ಅಸ್ಸಾಂ ವಿರುದ್ಧ ಕರ್ನಾಟಕ ತಂಡ ಇನ್ನಿಂಗ್ಸ್ ಜಯ ಸಾಧಿಸಿದೆ. ಇದರೊಡನೆ 84ನೇ ಆವೃತ್ತಿಯ ರಣಜಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯ ಗೆಲುವಿನ ಶುಭಾರಂಭ ಮಾಡಿದೆ.
ಆಲ್‌ರೌಂಡ್ ಆಟ ಆಡಿದ ವಿನಯ್ ಕುಮಾರ್ ನಾಯಕತ್ವದ ಕರ್ನಾಟಕ ತಂಡ ಅಸ್ಸಾಂ ವಿರುದ್ಧ ಇನ್ನಿಂಗ್ಸ್ ಮತ್ತು 121 ರನ್ ಗಳ ಗೆಲುವು ದಾಖಲಿಸಿತು.
ಮೊದಲ ಬ್ಯಾಟ್ ಮಾಡಿದ ಅಸ್ಸಾಂ ಮೊದಲ ಇನ್ನಿಂಗ್ಸ್ ನಲ್ಲಿ 145 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಸಮರ್ಥ್ 123, ಗೌತಮ್ ಕೆ 149 ರನ್ ಗಳ ನೆರವಿನೊಡನೆ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಗೆ 469 ರನ್ ಗಳಿಸಿತು.
ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ ಅಸ್ಸಾಂ ಕೇವಲ 203 ರನ್ ಗಳಿಗೆ ಸರ್ವಪತನ ಕಂಡಿತು. ಇದರೊಡನೆ ಇನ್ನಿಂಗ್ಸ್ ನೊಂದಿಗೆ 121 ರನ್ ಗಳ ಭರ್ಜರಿ ಜಯ ಕರ್ನಾಟಕದ ಪಾಲಿಗೆ ಒದಗಿತು.