ನಿಷೇಧಿತ ಉದ್ದೀಪನ ಮದ್ದು ಸೇವನೆ ಸುಳಿಯಲ್ಲಿ ಭಾರತೀಯ ಕ್ರಿಕೆಟಿಗ!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ ಮಾನ್ಯತೆ ಪಡೆದಿರುವ ಕ್ರಿಕೆಟಿಗನೊಬ್ಬ ನಿಷೇಧಿತ ಉದ್ದೀಪನ ಮದ್ದು ಸೇವನೆ ಮಾಡಿರುವ ಪ್ರಕರಣ...
ಟೀಂ ಇಂಡಿಯಾ
ಟೀಂ ಇಂಡಿಯಾ
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ ಮಾನ್ಯತೆ ಪಡೆದಿರುವ ಕ್ರಿಕೆಟಿಗನೊಬ್ಬ ನಿಷೇಧಿತ ಉದ್ದೀಪನ ಮದ್ದು ಸೇವನೆ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. 
2016ರಲ್ಲಿ ವಿಶ್ವ ಉದ್ದೀಪನ ಮದ್ದು ತಡೆ ಘಟಕ(ವಾಡಾ) ಬಿಸಿಸಿಐನಿಂದ ಮಾನ್ಯತೆ ಪಡೆದಿರುವ ಕ್ರಿಕೆಟಿಗರನ್ನು ಡೋಪಿಂಗ್ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಯಲ್ಲಿ ಓರ್ವ ಆಟಗಾರ ನಿಷೇಧಿತ ಮದ್ದು ಸೇವನೆ ಮಾಡಿರುವುದು ಪತ್ತೆಯಾಗಿದೆ ಎಂದು ವಾಡಾ ತಿಳಿಸಿದೆ. 
2013ರ ಐಪಿಎಲ್ ಆವೃತ್ತಿ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರನಾಗಿದ್ದ ಪ್ರದೀಪ್ ಸಾಂಗ್ವಾನ್ ಡೋಪಿಂಗ್ ಸುಳಿಯಲ್ಲಿ ಸಿಲುಕಿದ್ದರು. ಇದಾದ ಬಳಿಕ ಇದೀಗ ಮತ್ತೋರ್ವ ಭಾರತೀಯ ಆಟಗಾರನ ವಿರುದ್ಧ ಈ ಆರೋಪ ಕೇಳಿ ಬಂದಿದ್ದು ಆತನ ಹೆಸರನ್ನು ಇನ್ನು ಬಹಿರಂಗಪಡಿಸಿಲ್ಲ. 
ವಾಡಾ ಬಿಸಿಸಿಐ ಆಯೋಜಿಸುವ ಸ್ಥಳೀಯ ಪಂದ್ಯಾವಳಿಗಳ ವೇಳೆ ಡೋಪಿಂಗ್ ಪರೀಕ್ಷೆ ನಡೆಸಲಾಗುತ್ತಿದ್ದು ಆರೋಪಕ್ಕೆ ಗುರಿಯಾಗಿರುವ ಆಟಗಾರ ದೇಶಿ ಆಟಗಾರ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com