ಕಾನ್ಪುರ: ನ್ಯೂಜಿಲೆಂಡ್ ವಿರುದ್ದದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 6 ರನ್ ಗಳ ರೋಚಕ ಜಯ ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಅಂತೆಯೇ ನಾಯಕ ವಿರಾಟ್ ಕೊಹ್ಲಿ ಇದೀಗ ಮಾಡಿದ್ದೆಲ್ಲಾ ದಾಖಲೆ ಎಂಬಂತೆ ಈ ಪಂದ್ಯದ ಮೂಲಕ ಕೊಹ್ಲಿ ಹಲವು ದಾಖಲೆಗಳನ್ನು ತಮ್ಮ ಖಾತೆಗೆ ಬರೆದುಕೊಂಡಿದ್ದಾರೆ.
ಕೊಹ್ಲಿ ಮತ್ತು ತಂಡದ ಇತರೆ ದಾಖಲೆಗಳ ಕುರಿತಾದ ಒಂದಷ್ಟು ಅಂಕಿ ಅಂಶಗಳು ಇಲ್ಲಿವೆ.
1.ಒಂದೇ ವರ್ಷದಲ್ಲಿ 2000 ಅಂತಾರಾಷ್ಟ್ರೀಯ ರನ್ ಗಳಿಸಿದ ಮೊದಲ ಆಟಗಾರ
2. ಕೇವಲ 93 ಇನ್ನಿಂಗ್ಸ್ ಗಳಲ್ಲಿ 5000 ರನ್ ಪೂರೈಸಿದ ಮೊದಲ ನಾಯಕ
3.ಕೊಹ್ಲಿ ಇಂದು ತಮ್ಮ ಅಮೋಘ ಇನ್ನಿಂಗ್ಸ್ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ವೇಗವಾಗಿ 9 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದು, ಕೇವಲ 194 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಎಬಿಡಿವಿಲಿಯರ್ಸ್ 205 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.
4.2ನೇ ಬಾರಿಗೆ ವಿರಾಟ್ ಕೊಹ್ಲಿ ಕ್ರಿಕೆಟ್ ಋತುವಿನ ವರ್ಷದಲ್ಲಿ 2000 ರನ್ ಪೂರೈಸಿದ ಅಂತಾರಾಷ್ಟ್ರೀಯ ಆಟಗಾರರಾಗಿದ್ದಾರೆ.
5.ವಿಶ್ವ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ ಕೊಹ್ಲಿ ಮತ್ತು ರೋಹಿತ್ ಶರ್ಮಾ 200ಕ್ಕೂ ಹೆಚ್ಚು ರನ್ ಗಳ ಜೊತೆಯಾಟವಾಡಿದ ಆಟಗಾರರಾಗಿದ್ದಾರೆ. ಇಂದಿನ ಪಂದ್ಯವೂ ಸೇರಿದಂತೆ ಕೊಹ್ಲಿ ಮತ್ತು ರೋಹಿತ್ ಶರ್ಮಾ 4 ಬಾರಿ 200ಕ್ಕೂ ಹೆಚ್ಚು ರನ್ ಗಳ ಜೊತೆಯಾಟವಾಡಿದ್ದಾರೆ.
6. ಕ್ರಿಕೆಟ್ ಋತುವಿನ ವರ್ಷದಲ್ಲಿ 6ನೇ ಏಕದಿನ ಶತಕ ಸಿಡಿಸಿದ ಮೊದಲ ನಾಯಕ ಎಂಬ ಕೀರ್ತಿಗೂ ಕೊಹ್ಲಿ ಭಾಜನರಾಗಿದ್ದಾರೆ.
7.ಇಂದಿನ ಸರಣಿ ಗೆಲುವಿನ ಮೂಲಕ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದಿದ್ದು, ಅತೀ ಹೆಚ್ಚು ಬಾರಿ ಅಂದರೆ ಸತತ 7 ಏಕದಿನ ಸರಣಿಗಳಲ್ಲಿ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
8.ಅತೀ ಹೆಚ್ಚು ಬಾರಿ 200ಕ್ಕೂ ಅಧಿಕ ರನ್ ಗಳ ಜೊತೆಯಾಟದಲ್ಲಿ ಪಾಲ್ಗೊಂಡ ಆಟಗಾರ ಕೊಹ್ಲಿ..ಕೊಹ್ಲಿ ಈವರೆಗೂ 11 ಬಾರಿ 200ಕ್ಕೂ ಅಧಿಕ ರನ್ ಗಳ ಜೊತೆಯಾಟದಲ್ಲಿ ಪಾಲ್ಗೊಂಡಿದ್ದಾರೆ.
9.ವಿಶ್ವದ ಅತ್ಯಂತ ಯಶಸ್ವೀ ಜೊತೆಯಾಟವಾಡಿದ ಆಟಗಾರರಲ್ಲಿ ಕೊಹ್ಲಿ-ರೋಹಿತ್ ಶರ್ಮಾ ಅಗ್ರಗಣ್ಯರಾಗಿದ್ದು, ಕೊಹ್ಲಿ-ಶರ್ಮಾ ವಿಶ್ವದಲ್ಲೇ ಅತೀ ಹೆಚ್ಚು ಅಂದರೆ 12 ಬಾರಿ ಶತಕದ ಜೊತೆಯಾಟವಾಡಿದ್ದಾರೆ.
10.ಸಚಿನ್ ದಾಖಲೆ ಹಿಂಬಾಲಿಸುತ್ತಿರುವ ಕೊಹ್ಲಿ, ತವರಿನಲ್ಲಿ ಕೊಹ್ಲಿ ಒಟ್ಟು 14 ಶತಕಗಳನ್ನು ಸಿಡಿಸಿದ್ದು, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಹಿಂಬಾಲಿಸುತ್ತಿದ್ದಾರೆ, ಸಚಿನ್ ಖಾತೆಯಲ್ಲಿ ತವರಿನಲ್ಲಿ 20 ಶತಕ ಸಿಡಿಸಿರುವ ಸಾಧನೆ ಇದೆ...
11. ವರ್ಷದಲ್ಲಿ ಅತೀ ಹೆಚ್ಚು ರನ್ ಗಳ ಸಿಡಿಸಿದ ನಾಯಕ ಕೊಹ್ಲಿ..ರಿಕ್ಕಿ ಪಾಟಿಂಗ್ ದಾಖಲೆ ಪತನ..2017ನೇ ಸಾಲಿನಲ್ಲಿ ಕೊಹ್ಲಿ ನಾಯಕಾರಾಗಿ ಒಟ್ಟು 1460 ರನ್ ಗಳನ್ನು ಸಿಡಿಸಿದ್ದು, ಈ ಹಿಂದೆ 2007ರಲ್ಲಿ ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ 1424 ರನ್ ಗಳನ್ನು ಸಿಡಿಸಿದ್ದರು. ಆ ಮೂಲಕ ಕೊಹ್ಲಿ ಪಾಂಟಿಂಗ್ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.
ಕೊಹ್ಲಿ ಹೊರತಾಗಿ ಶರ್ಮಾ ಹೆಸರಲ್ಲೂ ಹಲವು ದಾಖಲೆಗಳು
1.2017ನೇ ಇಸವಿಯಲ್ಲಿ ಕೊಹ್ಲಿ ಹೊರತಾಗಿ 1000ರನ್ ಸಿಡಿಸಿದ ಬ್ಯಾಟ್ಸ್ ಮನ್ ಪೈಕಿ ರೋಹಿತ್ ಶರ್ಮಾ ಕೂಡ ಒಬ್ಬರು. ರೋಹಿತ್ ಶರ್ಮಾ 2017ನೇ ಇಸವಿಯಲ್ಲಿ 1000 ರನ್ ಪೂರೈಸಿದ 2ನೇ ಆಟಗಾರರಾಗಿದ್ದಾರೆ.
2.ರೋಹಿತ್ ಶರ್ಮಾ ಕೇವಲ 165 ಇನ್ನಿಂಗ್ಸ್ ಗಳಲ್ಲಿ 150 ಸಿಕ್ಸರ್ ಗಳನ್ನು ಸಿಡಿಸಿದ್ದು, ಕಡಿಮೆ ಇನ್ನಿಂಗ್ಸ್ ಗಳಲ್ಲಿ 150 ಸಿಕ್ಸರ್ ಗಳನ್ನು ಸಿಡಿಸಿದ ಆಟಗಾರರಲ್ಲಿ ಶರ್ಮಾ 2ನೇ ಯವರಾಗಿದ್ದಾರೆ.
3.150 ಸಿಕ್ಸರ್ ಸಿಡಿಸಿದ ಭಾರತದ 5ನೇ ಆಟಗಾರ ಎಂಬ ಕೀರ್ತಿಗೆ ರೋಹಿತ್ ಶರ್ಮಾ ಭಾಜನ