ಶ್ರೀಲಂಕಾದಲ್ಲಿ ಭಾರತೀಯ ಯುವ ಕ್ರಿಕೆಟಿಗ ಸಾವು

12 ವರ್ಷದ ಭಾರತೀಯ ಮೂಲದ ಕ್ರಿಕೆಟ್‌ ಆಟಗಾರನೊಬ್ಬ ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.
ಶ್ರೀಲಂಕಾದಲ್ಲಿ ಬಾರತೀಯ ಯುವ ಕ್ರಿಕೆಟಿಗ ಸಾವು
ಶ್ರೀಲಂಕಾದಲ್ಲಿ ಬಾರತೀಯ ಯುವ ಕ್ರಿಕೆಟಿಗ ಸಾವು
Updated on: 
ಕೊಲಂಬೋ: 12 ವರ್ಷದ ಭಾರತೀಯ ಮೂಲದ ಕ್ರಿಕೆಟ್‌ ಆಟಗಾರನೊಬ್ಬ ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.
ಗುಜರಾತ್‌ ಮೂಲದ ಈತ ಶ್ರೀಲಂಕಾದಲ್ಲಿ  ನಡೆಯುತ್ತಿರುವ 17 ವರ್ಷದೊಳಗಿನ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು 19 ಸದಸ್ಯರ ತಂಡದ ಜತೆ ಬಂದಿದ್ದ.. ಶ್ರೀಲಂಕಾದ ಪಮುನುಗಮಾ ದ ಹೋಟೆಲ್‌ನಲ್ಲಿ ತಂಗಿದ್ದ ಈ ಯುವಕನ ಹೆಸರು ಇನ್ನೂ ಪತ್ತೆಯಾಗಿಲ್ಲ.
ಈ ವೇಳೆ ತಂಡದ ನಾಲ್ವರು ಸದಸ್ಯರೊಂದಿಗೆ ಈಜುಕೊಳಕ್ಕೆ ತೆರಳಿದ್ದಾಗ ಈತ ನೀರಿನಲ್ಲಿ ಮುಳುಗಿದ್ದಾನೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಕಲಿಸಲಾಗಿದೆ. ಆದರೆ ಆಸ್ಪತ್ರೆ ತಲುಪುವಷ್ಟರಲ್ಲೇ ಯುವಕ ಮೃತನಾಗಿದ್ದ. ಆಸ್ಪತ್ರೆಯ ವೈದ್ಯರು ಯುವಕ ಮೃತಪಟ್ಟಿರುವುದನ್ನು ಖಾತರಿ ಪಡಿಸಿದ್ದಾರೆ.
ಸದ್ಯ ಯುವ ಕ್ರಿಕೆಟಿಗನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com