ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್‌ರನ್ನು ಸತತ 3 ಬಾರಿ ಖೆಡ್ಡಾಗೆ ಬೀಳಿಸಿದ ಚಹಾಲ್

ಸ್ಫೋಟಕ ಬ್ಯಾಟಿಂಗ್ ಗೆ ಹೆಸರುವಾಸಿಯಾಗಿರುವ ಆಸ್ಟ್ರೇಲಿಯಾ ತಂಡದ ಗ್ಲೇನ್ ಮ್ಯಾಕ್ಸ್‌ವೆಲ್‌ ಅಬ್ಬರಿಸಿದರೇ ಎದುರಾಳಿ ತಂಡಗಳಿಗೆ ಕಂಟಕವಾಗುವುದಂತು ಸತ್ಯ...
ಯುಜುವೇಂದ್ರ ಚಹಾಲ್, ಗ್ಲೇನ್ ಮ್ಯಾಕ್ಸ್ ವೆಲ್, ಎಂಎಸ್ ಧೋನಿ
ಯುಜುವೇಂದ್ರ ಚಹಾಲ್, ಗ್ಲೇನ್ ಮ್ಯಾಕ್ಸ್ ವೆಲ್, ಎಂಎಸ್ ಧೋನಿ
ಸ್ಫೋಟಕ ಬ್ಯಾಟಿಂಗ್ ಗೆ ಹೆಸರುವಾಸಿಯಾಗಿರುವ ಆಸ್ಟ್ರೇಲಿಯಾ ತಂಡದ ಗ್ಲೇನ್ ಮ್ಯಾಕ್ಸ್‌ವೆಲ್‌ ಅಬ್ಬರಿಸಿದರೇ ಎದುರಾಳಿ ತಂಡಗಳಿಗೆ ಕಂಟಕವಾಗುವುದಂತು ಸತ್ಯ. ಈ ಹಿಂದೆ ಟೀಂ ಇಂಡಿಯಾ ವಿರುದ್ಧವೇ ಅಬ್ಬರದ ಬ್ಯಾಟಿಂಗ್ ಮಾಡಿ ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. 
ಅಂತಹ ಸ್ಫೋಟಕ ಬ್ಯಾಟ್ಸ್ ಮನ್ ಅನ್ನು ಕಟ್ಟಿಹಾಕುವಂತಾ ಬ್ರಹ್ಮಾಸ್ತ್ರ ಟೀಂ ಇಂಡಿಯಾದಲ್ಲಿದ್ದಾರೆ. ಅವರೇ ಭಾರತದ ಯುವ ಡೈನಾಮಿಕ್ ರಿಸ್ಟ್ ಸ್ಪಿನ್ನರ್ ಯುಜುವೇಂದ್ರ ಚಹಾಲ್. ಚಹಾಲ್ ಮುಂದೆ ಮ್ಯಾಕ್ಸ್ ವೆಲ್ ಅಬ್ಬರಿಸಲು ಸಾಧ್ಯವಾಗುತ್ತಿಲ್ಲ. ಈಗಾಗಿಯೇ ಕಳೆದ ಮೂರು ಪಂದ್ಯಗಳಲ್ಲೂ ಚಹಾಲ್ ಗೆ ಬಲಿಯಾಗಿದ್ದಾರೆ. 
ಕಳೆದ ಮೂರು ಏಕದಿನ ಪಂದ್ಯಗಳಲ್ಲೂ ಆಸ್ಟ್ರೇಲಿಯಾದ ಟ್ರಂಪ್ ಕಾರ್ಡ್ ಆಗಿದ್ದ ಮ್ಯಾಕ್ಸ್‌ವೆಲ್‌ಗೆ ಪೆವಿಲಿಯನ್ ಹಾದಿ ತೋರಿಸಿದ್ದು ಇದೇ ಲೆಗ್ ಸ್ಪಿನ್ನರ್ ಚಹಾಲ್. ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಲಹೆಯಂತೆ ಬೌಲ್ ಮಾಡುವ ಯಜುವೇಂದ್ರ ತನ್ನ ಸ್ಪಿನ್ ಮಂತ್ರದ ಮೂಲಕ ಮ್ಯಾಕ್ಸ್‌ವೆಲ್ ರನ್ನು ಔಟ್ ಮಾಡಿದ್ದಾರೆ. 
ಚೆನ್ನೈನಲ್ಲಿನ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಚಹಾಲ್ ಎಸೆತದಲ್ಲಿ ಮ್ಯಾಕ್ಸ್‌ವೆಲ್‌ ಮನೀಶ್ ಪಾಂಡೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಕೊಲ್ಕತ್ತಾದಲ್ಲಿ ನಡೆದ 2ನೇ ಪಂದ್ಯದಲ್ಲಿ ಚಹಾಲ್ ಸ್ಪಿನ್ ಗೆ ಕಂಗಾಲಾದ ಗ್ಲೇನ್ ಮ್ಯಾಕ್ಸ್ ವೆಲ್ ಧೋನಿಯ ಅಮೋಷ ಸ್ಟಂಪ್ ಔಟ್ ಗೆ ಬಲಿಯಾದರು. ಇನ್ನು ಮೂರನೇ ಪಂದ್ಯದಲ್ಲೂ ಸಹ ಚಹಾಲ್ ಎಸೆತವನ್ನು ಫ್ರೆಂಚ್ ಫುಟ್ ಬಂದು ಭರ್ಜರಿ ಹೊಡೆತ ಹೊಡೆಯಲು ಹೋಗಿ ಮತ್ತೇ ಸ್ಟಂಪ್ ಔಟ್ ಆದರು. ಹೀಗೆ ಅಬ್ಬರದ ಬ್ಯಾಟ್ಸ್ ಮನ್ ರನ್ನು ಚಹಾಲ್ ತಮ್ಮ ಮಾಂತ್ರಿಕ ಸ್ಪಿನ್ ನಿಂದ ಔಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com