ಅಫ್ರಿದಿ ಶಬ್ಧಕೋಶದಲ್ಲಿ ಯುಎನ್ ಎಂದರೆ 'ಅಂಡರ್ ನೈಂಟೀನ್': ಅಫ್ರಿದಿ ಕಾಲೆಳೆದ ಗಂಭೀರ್

ಕಾಶ್ಮೀರ ವಿವಾದ ಕುರಿತು ಭಾರತವನ್ನು ಕೆಣಕಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯವರಿಗೆ ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಮಂಗಳವಾರ ಟಾಂಗ್ ನೀಡಿದ್ದಾರೆ...
ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ
ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ
ನವದೆಹಲಿ: ಕಾಶ್ಮೀರ ವಿವಾದ ಕುರಿತು ಭಾರತವನ್ನು ಕೆಣಕಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯವರಿಗೆ ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಮಂಗಳವಾರ ಟಾಂಗ್ ನೀಡಿದ್ದಾರೆ. 
ಅಫ್ರಿದಿಯವರ ಕಾಶ್ಮೀರ ಕುರಿತ ಟ್ವೀಟ್'ಗೆ ಟ್ಟಿಟರ್ ನಲ್ಲಿಯೇ ಪ್ರತಿಕ್ರಿಯೆ ನೀಡಿರುವ ಗಂಭೀರ್ ಅವರು, ಅಫ್ರಿದಿಯ ಶಬ್ದಕೋಶದಲ್ಲಿ ಯುಎನ್ ಎಂದರೆ ಅಂಡರ್ ನೈಂಟಾನ್ ಎಂದು. ಅವರು ಮತ್ತೊಮ್ಮೆ ನೋ-ಬಾಲ್ ನಲ್ಲಿ ವಿಕೆಟ್ ಪಡೆದು ಸಂಭ್ರಮಿಸುತ್ತಿದ್ದಾರೆ. ಭಾರತೀಯ ಮಾಧ್ಯಮಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಗಂಭೀರ್ ಅವರ ಈ ಟ್ವೀಟ್'ಗೆ ಭಾರತೀಯರಿಂದ ಭಾರೀ ಬೆಂಬಲ ಹಾಗೂ ಮೆಚ್ಚುಗೆಗಳು ವ್ಯಕ್ತವಾಗತೊಡಗಿವೆ. ಜೊತೆಗೆ ಅವರ ಟ್ವೀಟ್ ಟ್ರೆಂಡ್ ಸಹ ಆಗಿದ್ದು, ಸಾವಿರಾರು ಮಂದಿ ರೀ ಟ್ವೀಟ್ ಮಾಡಿದ್ದಾರೆ. 
ಕಾಶ್ಮೀರದಲ್ಲಿ ಭಾರತೀಯ ಸೇನೆ 13 ಉಗ್ರರನ್ನು ಹೊಡೆದುರುಳಿಸಿತ್ತು. ಈ ಹಿನ್ನಲೆಯಲ್ಲಿ ಕಾಶ್ಮೀರ ವಿವಾದ ಕುರಿತಂತೆ ಟ್ವೀಟ್ ಮಾಡಿದ್ದ ಅಫ್ರಿದಿಯವರು, ಪಿಒಕೆಯನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ಕರೆದಿದ್ದರು. ಭಾರತ ಆಕ್ರಮಿತ ಕಾಶ್ಮೀರದಲ್ಲಿ ಹಿಂಸಾಚರ ನಡೆಯುತ್ತಿದೆ. ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಾರ್ವಜನಿಕರಿಗೆ ಭಾರೀ ತೊಂದರೆಯಾಗುತ್ತಿದೆ. ವಿಶ್ವಸಂಸ್ಥೆ (ಯುಎನ್) ಹಾಗೂ ಇನ್ನಿತರೆ ಸಂಸ್ಥೆಗಳು ರಕ್ತಪಾತವನ್ನು ನಿಲ್ಲಿಸಲು ಏಕೆ ಪ್ರಯತ್ನಿಸುತ್ತಿಲ್ಲ ಎಂದು ಬರೆದುಕೊಂಡಿದ್ದರು. ಇದಕ್ಕೆ ಪಾಕಿಸ್ತಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತೀಯರಿಂದ ಭಾರೀ ಟೀಕೆಗಳು ವ್ಯಕ್ತವಾಗತೊಡಗಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com