ಜೈಪುರ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಬಾದ್ ತಂಡ ರಾಜಸ್ತಾನ ರಾಯಲ್ಸ್ ವಿರುದ್ಧ ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.
ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಪೇರಿಸಿತು.
ಹೈದರಾಬಾದ್ ನೀಡಿದ 152 ರನ್ ಗಳ ಗುರಿ ಪಡೆದ ರಾಜಸ್ತಾನ ರಾಯಲ್ಸ್ ತಂಡ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 140 ರನ್ ಬಾರಿಸಿ 11 ರನ್ ಗಳಿಂದ ಸೋಲು ಅನುಭವಿಸಿತು.
ಸನ್‌ರೈಸರ್ಸ್ ಹೈದರಾಬಾದ್ ಪರ ಹಾಲೇಸ್ 45, ಕೇನ್ ವಿಲಿಯಮ್ಸನ್ 63 ಮತ್ತು ಮನೀಷ್ ಪಾಂಡೆ 16 ರನ್ ಗಳಿಸಿದ್ದಾರೆ. ರಾಜಸ್ತಾನ ಪರ ಬೌಲಿಂಗ್ ನಲ್ಲಿ ಆರ್ಚೆರ್ 3 ಮತ್ತು ಗೌತಮ್ 2 ವಿಕೆಟ್ ಪಡೆದಿದ್ದಾರೆ.
ರಾಜಸ್ತಾನ ರಾಯಲ್ಸ್ ಪರ ಅಜಿಂಕ್ಯ ರಹಾನೆ 65 ಮತ್ತು ಸಂಜು ಸ್ಯಾಮ್ಸನ್ 40 ರನ್ ಬಾರಿಸಿದ್ದಾರೆ. ಹೈದರಾಬಾದ್ ಪರ ಬೌಲಿಂಗ್ ನಲ್ಲಿ ಕೌಲ್ 2 ವಿಕೆಟ್ ಪಡೆದಿದ್ದಾರೆ.