ಮೂರನೇ ಟೆಸ್ಟ್: ಕೊಹ್ಲಿ, ಪೂಜಾರ ಭರ್ಜರಿ ಬ್ಯಾಟಿಂಗ್, ಟೀ ವಿರಾಮದ ವೇಳೆ 270/3
ಮೂರನೇ ಟೆಸ್ಟ್: ಕೊಹ್ಲಿ, ಪೂಜಾರ ಭರ್ಜರಿ ಬ್ಯಾಟಿಂಗ್, ಟೀ ವಿರಾಮದ ವೇಳೆ 270/3

ಮೂರನೇ ಟೆಸ್ಟ್: ಕೊಹ್ಲಿ, ಪೂಜಾರ ಭರ್ಜರಿ ಬ್ಯಾಟಿಂಗ್, ಟೀ ವಿರಾಮದ ವೇಳೆ 270/3

ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಟಿಂಗ್‌ಹ್ಯಾಮ್‌ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ನ ಮೂರನೇ ದಿನವಾದ ಸೋಮವಾರ ಚಹಾ ವಿರಾಮದ ವೇಳೆಗೆ ಭಾರತ 3 ವಿಕೆಟ್‌ ನಷ್ಟಕ್ಕೆ 270 ರನ್‌ ಗಳಿಸಿತ್ತು.
ನಾಟಿಂಗ್‌ಹ್ಯಾಮ್‌: ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಟಿಂಗ್‌ಹ್ಯಾಮ್‌ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ನ ಮೂರನೇ ದಿನವಾದ ಸೋಮವಾರ ಚಹಾ ವಿರಾಮದ ವೇಳೆಗೆ ಭಾರತ 3 ವಿಕೆಟ್‌ ನಷ್ಟಕ್ಕೆ 270 ರನ್‌ ಗಳಿಸಿತ್ತು.
ಇದೀಗ ಒಟ್ಟಾರೆ 438 ರನ್ ಬೃಹತ್ ಮುನ್ನಡೆ ಸಾಧಿಸಿರುವ ಭಾರತ ಟೆಸ್ಟ್ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎನ್ನಬಹುದು.
ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮತ್ತು ಚೀತೇಶ್ವರ ಪೂಜಾರ ಪ್ರಸಕ್ತ ಬ್ಯಾಟಿಂಗ್ ನಡೆಸಿದ್ದು ಪೂಜಾರ 208 ಎಸೆತಗಳಲ್ಲಿ 9 ಬೌಂಡರಿ ಸಹಿತ 72 ರನ್‌ ಗಳಿಸಿದ್ದರೆ ಕೊಹ್ಲಿ 182 ಎಸೆತಗಳಲ್ಲಿ 8 ಬೌಂಡರಿ ಸಹಿತ 93 ರನ್‌ ಕಲೆ ಹಾಕಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್: 329/10
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 161/10
ಭಾರತ ಎರಡನೇ ಇನ್ನಿಂಗ್ಸ್: 270/3 (ಟೀ ವಿರಾಮದ ವೇಳೆಗೆ)

Related Stories

No stories found.

Advertisement

X
Kannada Prabha
www.kannadaprabha.com