ಸುಂದರ ಹುಡುಗನನ್ನು ಭೇಟಿ ಮಾಡಿದ ವಿರುಷ್ಕಾ ದಂಪತಿ

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ವೇಳೆ ವಿರಾಮ ಪಡೆದು ಲಂಡನ್ ನಲ್ಲಿ ಶಾಪಿಂಗ್ ...
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ

ಲಂಡನ್ : ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ವೇಳೆ ವಿರಾಮ ಪಡೆದು ಲಂಡನ್ ನಲ್ಲಿ ಶಾಪಿಂಗ್ ಮಾಡಲು ಹೊರಟ ವಿರುಷ್ಕಾ ದಂಪತಿಗೆ ಸುಂದರ ಹುಡುಗನೊಬ್ಬ ಸಿಕ್ಕಿದ್ದಾನೆ.

ಕ್ರಿಕೆಟ್ ಪಂದ್ಯ ಮುಗಿದ ಬಳಿಕ ಕೊಹ್ಲಿ ಹಾಗೂ ಅನುಷ್ಕಾ ಶಾಪಿಂಗ್ ಅಂತ ಸುತ್ತಲು ಹೊರಟರು. ಆ ವೇಳೆ ಲಂಡನ್​ನಲ್ಲಿ ವಿಶೇಷ ಹುಡುಗನೊಬ್ಬನನ್ನು ಭೇಟಿ ಮಾಡಿದ್ದರು.  ಆತನೊಂದಿಗೆ ನಿಂತು ಫೋಟೋವೊಂದನ್ನು ಕೂಡ ಕ್ಲಿಕ್ಕಿಸಿಕೊಂಡರು. ಅದನ್ನು ವಿರಾಟ್ ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಹಾಕಿಕೊಂಡಿದ್ದಾರೆ, ನಾವು ಒಬ್ಬ ಸುಂದರ ಹುಡುಗನನ್ನ ಭೇಟಿ ಮಾಡಿದ್ದೆವು.... ಆತ  ನಮ್ಮೊಂದಿಗೆ ತಾಳ್ಮೆಯಿಂದಿದ್ದು, ಫೋಟೋ ಕ್ಲಿಕ್ಕಿಸಲು ಅವಕಾಶ ನೀಡಿದ ಎಂದು ತಲೆ ಬರಹ ನೀಡಿ ಗಮನ ಸೆಳೆದಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಆ ಹುಡುಗ ಬೇರೆ ಯಾರು ಅಲ್ಲ, ಒಂದು ನಾಯಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com