4ನೇ ಟೆಸ್ಟ್ ಪಂದ್ಯ: ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 246ಕ್ಕೆ ಆಲೌಟ್

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್ ಗಳು ಪ್ರಭಾವಿ ಬೌಲಿಂಗ್ ಪ್ರದರ್ಶನ ತೋರಿದ್ದು, ಆಂಗ್ಲರನ್ನು ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 246ರನ್ ಗಳಿಗೆ ಕಟ್ಟಿ ಹಾಕಿದ್ದಾರೆ.
ಭಾರತದ ಬೌಲಿಂಗ್ ದಾಳಿಗೆ ಕಂಗಾಲಾದ ಇಂಗ್ಲೆಂಡ್
ಭಾರತದ ಬೌಲಿಂಗ್ ದಾಳಿಗೆ ಕಂಗಾಲಾದ ಇಂಗ್ಲೆಂಡ್
ಸೌಥ್ಯಾಂಪ್ಟನ್: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್ ಗಳು ಪ್ರಭಾವಿ ಬೌಲಿಂಗ್ ಪ್ರದರ್ಶನ ತೋರಿದ್ದು, ಆಂಗ್ಲರನ್ನು ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 246ರನ್ ಗಳಿಗೆ ಕಟ್ಟಿ ಹಾಕಿದ್ದಾರೆ.
ಭಾರತದ ಸಾಂಘಿ ಬೌಲಿಂಗ್ ದಾಳಿ ತತ್ತರಿಸಿದ ಆಂಗ್ಲರು ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡಕ್ಕೆ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ಮೊದಲ ಶಾಕ್ ನೀಡಿದರು. ಕೀಟನ್ ಜೆನ್ನಿಂಗ್ಸ್ ರನ್ನು ಶೂನ್ಯಕ್ಕೆ ಎಲ್ ಬಿ ಬಲೆಗೆ ಕೆಡವುವ ಮೂಲಕ ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಬಳಿಕ ಜೋರೂಟ್ ಕೂಡ ಇಶಾಂತ್ ಶರ್ಮಾ ಬೌಲಿಂಗ್ ನಲ್ಲಿ 4 ರನ್ ಗಳಿಸಿದ್ದಾಗ ಎಲ್ ಬಿ ಬಲೆಗೆ ಬಿದ್ದರು. ಜೋ ರೂಟ್ ವಿಕೆಟ್ ಬೀಳುತ್ತಿದ್ದಂತೆಯೇ ಇಂಗ್ಲೆಂಡ್ ಆಟಗಾರರ ಪೆವಿಲಿಯನ್ ಪರೇಡ್ ಆರಂಭವಾಗಿತ್ತು.
ಜಾನ್ ಬೇರ್ ಸ್ಟೋ (6 ರನ್), ಅಲೆಸ್ಟರ್ ಕುಕ್ (17 ರನ್), ಜಾಸ್ ಬಟ್ಲರ್ (25 ರನ್), ಬೆನ್ ಸ್ಟೋಕ್ಸ್ (23 ರನ್) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇಂಗ್ಲೆಂಡ್ ದಿಢೀರ್ ಕುಸಿತವನ್ನು ಮಧ್ಯಮ ಕ್ರಮಾಂಕದ ಆಟಗಾರ ಮೊಯೀನ್ ಅಲಿ ಕೊಂಚ ತಡೆಯುವ ಪ್ರಯತ್ನ ಮಾಡಿದರು. ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಅವರು 85 ಎಸೆತಗಳಲ್ಲಿ 40 ರನ್ ಕಲೆ ಹಾಕಿ ಇಂಗ್ಲೆಂಡ್ ಆಟಕ್ಕೆ ಬೆನ್ನೆಲುಬಾದರು. ಆದರೆ ಈ ಹಂತದಲ್ಲಿ ಅಶ್ವಿನ್ ಬೌಲಿಂಗ್ ನಲ್ಲಿ ಅಲಿ ಔಟ್ ಆದರು. ಸ್ಯಾಮ್ ಕರ್ರನ್ ಉತ್ತಮ ಇನ್ನಿಂಗ್ಸ್ ಕಟ್ಟಿ ಇಂಗ್ಲೆಂಡ್ ತಂಡ 200ರನ್ ಗಡಿ ದಾಟುವಂತೆ ನೋಡಿಕೊಂಡರು. ಈ ಹಂತದಲ್ಲಿ ಸ್ಟುವರ್ಟ್ ಬ್ರಾಡ್ (17ರನ್) ಉತ್ತಮ ಸಾಥ್ ನೀಡಿದರಾದರೂ, ಬುಮ್ರಾ ಅವರನ್ನೂ ಎಲ್ ಬಿ ಬಲೆಗೆ ಕೆಡವಿದರು. ಬಳಿಕ 136 ಎಸೆತಗಳನ್ನು ಎದುರಿಸಿದ್ದ ಕರ್ರನ್ 78 ರನ್ ಗಳಿಸಿ ಅಶ್ವಿನ್ ಬೌಲಿಂಗ್ ನಲ್ಲಿ ಔಟ್ ಆದರು. ಆ ಮೂಲಕ ಇಂಗ್ಲೆಂಡ್ ತಂಡ 246ರನ್ ಗಳಿಗೆ ಆಲೌಟ್ ಆಯಿತು.
ಭಾರತದ ಪರ ಬುಮ್ರಾ 3 ವಿಕೆಟ್ ಪಡೆದು ಮಿಂಚಿದರೆ, ಇಶಾಂತ್ ಶರ್ಮಾ, ಶಮಿ ಮತ್ತು ಅಶ್ವಿನ್ ತಲಾ 2 ವಿಕೆಟ್ ಪಡೆದರು, ಪಾಂಡ್ಯಾ ಕೂಡ 1 ವಿಕೆಟ್ ಪಡೆದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com