4ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 273ಕ್ಕೆ ಆಲೌಟ್

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 273ಕ್ಕೆ ಆಲೌಟ್ ಆಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸೌಥ್ಯಾಂಪ್ಟನ್: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 273ಕ್ಕೆ ಆಲೌಟ್ ಆಗಿದೆ.
ಇಂಗ್ಲೆಂಡ್ ಅನ್ನು 246ರನ್ ಗಳಿಗೆ ಕಟ್ಟಿ ಹಾಕಿದ ಭಾರತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿತ್ತು. ಭಾರತ ತಂಡಕ್ಕೆ ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡಿದರಾದರೂ ಸ್ಟುವರ್ಟ್ ಬ್ರಾಡ್ ಬೌಲಿಂಗ್ ನಲ್ಲಿ ಇಬ್ಬರೂ ಔಟ್ ಆದರು. ಬಳಿಕ ಕ್ರೀಸ್ ಗೆ ಆಗಮಿಸಿದ ಚೇತೇಶ್ವರ ಪೂಜಾರಾ ಭಾರತದ ಇನ್ನಿಂಗ್ಸ್ ಗೆ ಬೆನ್ನೆಲುಬಾದರು. ಪೂಜಾರಾ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ 46 ರನ್ ಸಿಡಿಸಿ ಉತ್ತಮ ಸಾಥ್ ನೀಡಿದರು. ಆದರೆ ಅರ್ಧಶತಕ ಹೊಸ್ತಿಲಲ್ಲಿದ್ದಾಗಲೇ ಸ್ಯಾಮ್ ಕರನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
ಬಳಿಕ ಆರಂಭವಾಗಿದ್ದು ಮೊಯಿನ್ ಬೌಲಿಂಗ್ ದಾಳಿ.. ಮೊಯಿನ್ ಅಲಿ ಸ್ಪಿನ್ ದಾಳಿಗೆ ತತ್ತರಿಸಿದ ಭಾರತೀಯ ಬ್ಯಾಚ್ಸಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು. ರಿಷಬ್ ಪಂತ್ ಶೂನ್ಯಕ್ಕೆ ಎಲ್ ಬಿ ಬಲೆಗೆ ಬಿದ್ದರೆ, ಹಾರ್ದಿಕ್ ಪಾಂಡ್ಯಾ 4 ರನ್ ಗಳಿಸಿ ಔಟ್ ಆದರು. ಬಳಿಕ ಆರ್ ಅಶ್ವಿನ್, ಶಮಿ ಮತ್ತು ಇಶಾಂತ್ ಶರ್ಮಾ ಕೂಡ ಅಲಿ ಬೌಲಿಂಗ್ ನಲ್ಲಿ ಔಟ್ ಆದರು. ಉತ್ತಮ ಸ್ಥಿತಿಯಲ್ಲಿದ್ದ ಭಾರತಕ್ಕೆ ಮೊಯಿನ್ ಅಲಿ ನೀಡಿದ ದಿಡೀರ್ ಶಾಕ್ ತಂಡ ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿತು. ಆಂತಿಮವಾಗಿ ಬುಮ್ರಾ ಬ್ರಾಡ್ ಬೌಲಿಂಗ್ ನಲ್ಲಿ ಔಟ್ ಆಗುವುದರೊಂದಿಗೆ ಭಾರತ ತಂಡ 273 ರನ್ ಗಳಿಗೆ ಆಲೌಟ್ ಆಯಿತು. ಪೂಜಾರಾ 132 ರನ್ ಗಳಿಸಿ ಅಜೇಯರಾಗಿ ಉಳಿದರು.
ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ 3 ವಿಕೆಟ್ ಗಳಿಸಿದರೆ, ಮೊಯಿನ್ ಅಲಿ 5 ವಿಕೆಟ್ ಪಡೆದರು. ಸ್ಯಾಮ್ ಕರನ್ ಮತ್ತು ಬೆನ್ ಸ್ಟೋಕ್ಸ್ ತಲಾ 1 ವಿಕೆಟ್ ಪಡೆದರು.
2ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ವಿಕೆಟ್ ನಷ್ಟ ವಿಲ್ಲದೇ 6 ರನ್
ಇನ್ನು ಇಂಗ್ಲೆಂಡ್ ತಂಡ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ್ದು, ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದೆ. ಇಂಗ್ಲೆಂಡ್ ಆರಂಭಿಕರಾದ ಅಲೆಸ್ಟರ್ ಕುಕ್ (2 ರನ್) ಮತ್ತು ಕೀಟನ್ ಜೆನ್ನಿಂಗ್ಸ್ (4 ರನ್) 3ನವೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com