ಮತ್ತೆ ಕುಸಿದ ಅಗ್ರ ಕ್ರಮಾಂಕ; ರಿಷಬ್ ಪಂತ್, ಹನುಮ ವಿಹಾರಿ ಮೇಲೆ ಒತ್ತಡ, ಭಾರತ 112/5

ಪರ್ತ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್ ಪಂದ್ಯದ 2 ನೇ ಇನ್ನಿಂಗ್ಸ್ ನಲ್ಲಿ ಭಾರತದ ಅಗ್ರ ಕ್ರಮಾಂಕದ ಆಟಗಾರರು ಮತ್ತೆ ಎಡವಿದ್ದು 4 ನೇ ದಿನಾಂತ್ಯಕ್ಕೆ ಭಾರತ 112ರನ್ ಗಳಿಸಿ 5 ವಿಕೆಟ್
ಮತ್ತೆ ಕುಸಿದ ಅಗ್ರ ಕ್ರಮಾಂಕ; ರಿಷಬ್ ಪಂತ್, ಹನುಮ ವಿಹಾರಿ ಮೇಲೆ ಒತ್ತಡ, ಭಾರತ 112/5
ಮತ್ತೆ ಕುಸಿದ ಅಗ್ರ ಕ್ರಮಾಂಕ; ರಿಷಬ್ ಪಂತ್, ಹನುಮ ವಿಹಾರಿ ಮೇಲೆ ಒತ್ತಡ, ಭಾರತ 112/5
ಪರ್ತ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್ ಪಂದ್ಯದ 2 ನೇ ಇನ್ನಿಂಗ್ಸ್ ನಲ್ಲಿ ಭಾರತದ ಅಗ್ರ ಕ್ರಮಾಂಕದ ಆಟಗಾರರು ಮತ್ತೆ ಎಡವಿದ್ದು 4 ನೇ ದಿನಾಂತ್ಯಕ್ಕೆ ಭಾರತ 112ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ. 
ಭಾರತ ತಂಡದ ಅಗ್ರ ಕ್ರಮಾಂಕದ ಆಟಗಾರರು ಮತ್ತೆ ಎಡವಿರುವುದರ ಪರಿಣಾಮ ಈಗ ರಿಷಬ್ ಪಂತ್ ಹಾಗೂ ಹನುಮ ವಿಹಾರಿ ಮೇಲೆ ಹೆಚ್ಚಿನ ಒತ್ತಡ ಇದೆ. 
ಕೆ.ಎಲ್ ರಾಹುಲ್, ಚೆತೇಶ್ವರ್ ಪೂಜಾರಾ ಸೇರಿದಂತೆ, ಆಸ್ಟ್ರೇಲಿಯಾ ನೀಡಿದ 287 ರನ್ ಟಾರ್ಗೆಟ್ ನ್ನು ಬೆನ್ನಟ್ಟಿದ ಭಾರತದ ಯಾವುದೇ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಆಸ್ಟ್ರೇಲಿಯಾ  ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ನಾಯಕ ವಿರಾಟ್ (17 ರನ್) ಮುರಳಿ ವಿಜಯ್ (20) ರನ್ ಗಳಿಸಿ ಪೆವಿಲಿಯನ್ ಗೆ ನಡೆದರು. 
ವಿಜಯ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ ಬಳಿಕ ಅಜಿಂಕ್ಯಾ ರೆಹಾನೆ ಹಾಗೂ ಅನುಮ ವಿಹಾರಿ ಇನ್ನಿಂಗ್ಸ್ ಕಟ್ಟಲು ಯತ್ನಿಸಿದರಾದರೂ 43 ರನ್ ಕಲೆ ಹಾಕುವಷ್ಟರಲ್ಲಿ ಭಾರತ 5 ನೇ ವಿಕೆಟ್ ಕಳೆದುಕೊಂಡಿತ್ತು. ಕ್ರೀಸ್ ನಲ್ಲಿ ಹನುಮವಿಹಾರಿ ಮತ್ತು ರಿಷಬ್ ಪಂತ್ ಉಳಿದಿದ್ದು, ಭಾರತ ಗೆಲ್ಲುವುದಕ್ಕೆ ಅವರ ಮೇಲೆ ಹೆಚ್ಚಿನ ಒತ್ತಡವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com