ಐಪಿಎಲ್ 2019 ಹರಾಜು: ಆರ್ ಸಿಬಿ ಪಾಲಾದ ವಿಂಡೀಸ್ ಬಿಗ್ ಹಿಟ್ಟರ್ ಹೇಟ್ಮರ್

ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ 2019ರ ಟೂರ್ನಿಯ ಹರಾಜು ಪ್ರಕ್ರಿಯೆಲ್ಲಿ ವಿಂಡೀಸ್ ನ ಬಿಗ್ ಹಿಟ್ಟರ್ ಶಿಮ್ರಾನ್ ಹೆಟ್ಮರ್ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪಾಲಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಜೈಪುರ: ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ 2019ರ ಟೂರ್ನಿಯ ಹರಾಜು ಪ್ರಕ್ರಿಯೆಲ್ಲಿ ವಿಂಡೀಸ್ ನ ಬಿಗ್ ಹಿಟ್ಟರ್ ಶಿಮ್ರಾನ್ ಹೆಟ್ಮರ್ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪಾಲಾಗಿದ್ದಾರೆ.
ಅಂತೆಯೇ ಶಿವಂ ದುಬೆ ಅವರೂ ಕೂಡ ಆರ್ ಸಿಬಿ ಪಾಲಾಗಿದ್ದು, ಈ ಇಬ್ಬರು ಆಟಗಾರರಿಗಾಗಿ ಆರ್ ಸಿಬಿ ಫ್ರಾಂಚೈಸಿಗಳು ಒಟ್ಟು 9.2 ಕೋಟಿ ರೂ ಬಿಡ್ ಮಾಡಿದ್ದಾರೆ. ಅಂತೆಯೇ ಭಾರತದ ಮತ್ತೋರ್ವ ಆಟಗಾರ ಆಕ್ಷ್ ದೀಪ್ ನಾಥ್ ಕೂಡ ಆರ್ ಸಿಬಿ ಪಾಲಾಗಿದ್ದು, ಅಕ್ಷ್ ದೀಪ್ ನಾಥ್ ಒಟ್ಟು 3.6 ಕೋಟಿ ರೂಗೆ ಮಾರಾಟವಾದರು. ಆ ಮೂಲಕ ಹಾಲಿ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತಕ್ಕ ಹರಾಜಾದ ಮೂರನೇ ಆಟಗಾರ ಎಂಬ ಕೀರ್ತಿಗೂ ಭಾಜನರಾದರು.
ಹೇಟ್ಮರ್, ಶಿವಂ ದುಬೆ ಮತ್ತು ಅಕ್ಷ್ ದೀಪ್ ನಾಥ್ ಸೇರ್ಪಡೆಯೊಂದಿಗೆ ಆರ್ ಸಿಬಿ ಬ್ಯಾಟಿಂಗ್ ಸಾಮರ್ಥ್ಯ ಕೂಡ ಹೆಚ್ಚಿದೆ. 
ಜಯದೇವ್ ಗೂ ಭಾರಿ ಬೆಲೆ
ವೇಗದ ಬೌಲರ್‌ ಜಯದೇವ್‌ ಉನದ್ಕತ್‌ ಕೂಡಾ ರೂ. 8.4 ಕೋಟಿ ಮೌಲ್ಯ ಪಡೆದರು. ಅವರನ್ನು ರಾಜಸ್ಥಾನ ರಾಯಲ್ಸ್‌ ತಂಡ ಖರೀದಿಸಿತು. ಜಯದೇವ್‌ ಅವರು ಈ ವರ್ಷದ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ 11ನೇ ಆವೃತ್ತಿಯ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದು ದಾಖಲೆ ನಿರ್ಮಿಸಿದ್ದರು. ಅವರನ್ನು ರಾಯಲ್ಸ್‌ ರೂ.11.5 ಕೋಟಿ ನೀಡಿ ಖರೀದಿಸಿತ್ತು. ಆದರೆ ಈ ಬಾರಿ ತಂಡದಿಂದ ಕೈಬಿಟ್ಟು ಹಿಂದಿಗಿಂತಲೂ ಕಡಿಮೆ ಮೊತ್ತಕ್ಕೆ ಸೆಳೆದುಕೊಳ್ಳುವಲ್ಲಿ ರಾಯಲ್ಸ್‌ ಯಶಸ್ವಿಯಾಗಿದೆ. ಶ್ರೀಲಂಕಾದ ವೇಗದ ಬೌಲರ್‌ ಲಸಿತ್‌ ಮಾಲಿಂಗ ಅವರನ್ನು ಮುಂಬೈ ಇಂಡಿಯನ್ಸ್‌ ತಂಡ ಮೂಲ ಬೆಲೆಗೆ (ರೂ. 2 ಕೋಟಿ) ಸೆಳೆದುಕೊಂಡಿದೆ. ಲಸಿತ್‌ ಅವರು ಹಿಂದಿನ ಆವೃತ್ತಿಯಲ್ಲಿ ಮುಂಬೈ ತಂಡದ ಬೌಲಿಂಗ್‌ ಸಲಹೆಗಾರರಾಗಿದ್ದರು.
ವಿಂಡೀಸ್‌ ಆಟಗಾರರಿಗೂ ಬೇಡಿಕೆ
ವೆಸ್ಟ್‌ ಇಂಡೀಸ್‌ ಆಟಗಾರರಿಗೂ ಹರಾಜಿನಲ್ಲಿ ಉತ್ತಮ ಮೊತ್ತ ಮೊತ್ತ ಲಭಿಸಿದವು. ರೂ. 50 ಲಕ್ಷ ಮೂಲಬೆಲೆ ಹೊಂದಿದ್ದ ಶಿಮ್ರನ್‌ ಹೆಟ್ಮೆಯರ್‌ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ರೂ. 4.2 ಕೋಟಿ ನೀಡಿ ಖರೀದಿಸಿತು. ಆಲ್‌ರೌಂಡರ್‌ ಕಾರ್ಲೊಸ್‌ ಬ್ರಾಥ್‌ವೇಟ್‌ ಅವರಿಗೆ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡ ರೂ. 5 ಕೋಟಿ ನೀಡಿ ತನ್ನದಾಗಿಸಿಕೊಂಡಿತು. ಭಾರತದ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ಗೂ ರೂ. 5 ಕೋಟಿ ಲಭಿಸಿತು. ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತನ್ನದಾಗಿಸಿಕೊಂಡಿತು.
ಮುಂಬೈ ಇಂಡಿಯನ್ಸ್ ಗೆ ಯುವಿ, ಜಹೀರ್‌ ನಿರ್ದೇಶಕ
ಭಾರತದ ಅನುಭವಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರನ್ನು ಮುಂಬೈ ಇಂಡಿಯನ್ಸ್‌ ತನ್ನದಾಗಿಸಿಕೊಂಡಿತು. ಮೊದಲ ಬಾರಿ ಯುವಿ ಹೆಸರು ಹರಾಜಿನಲ್ಲಿ ಕೂಗಿದಾಗ ಅವರನ್ನು ಖರೀದಿಸಲು ಯಾರೂ ಆಸಕ್ತಿ ತೋರಲಿಲ್ಲ. ಮೊದಲ ಸುತ್ತಿನ ಹರಾಜು ಮುಗಿದ ನಂತರ ಮತ್ತೊಮ್ಮೆ ಯುವಿ ಹೆಸರು ಕೂಗಲಾಯಿತು. ಆಗ ಮುಂಬೈ ಇಂಡಿಯನ್ಸ್‌ ತಂಡ ಬಿಡ್‌ ಮಾಡಿತು. ನೀತಾ ಅಂಬಾನಿ ಒಡೆತನದ ಮುಂಬೈ ಫ್ರಾಂಚೈಸ್‌ ಯುವಿಗೆ ರೂ. 1 ಕೋಟಿ ನೀಡಿತು.
ಯುವಕರತ್ತ ಒಲವು
ಈ ಬಾರಿಯ ಆಟಗಾರರ ಹರಾಜಿನಲ್ಲಿ ಫ್ರಾಂಚೈಸ್‌ಗಳು ಯುವಕರತ್ತ ಹೆಚ್ಚು ಒಲವು ತೋರಿದವು. ಪ್ರಯಾಸ್‌ ರೇ ಬರ್ಮನ್‌, ಪ್ರಭ್‌ ಸಿಮ್ರನ್‌ ಸಿಂಗ್‌ ಅವ ರಂತಹ ಚಿಗುರು ಮೀಸೆಯ ಹುಡುಗರು ಕುಬೇರರಾದರು. ಅಂತೆಯೇ ಭಾರತದ ಹಿರಿಯ ವೇಗದ ಬೌಲರ್‌ ಜಹೀರ್‌ ಖಾನ್‌ ಅವರು ಮುಂಬೈ ಇಂಡಿಯನ್ಸ್‌ ತಂಡದ ಕ್ರಿಕೆಟ್‌ ಆಪರೇಷನ್ಸ್‌ ವಿಭಾಗದ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಮುಂಬೈ ತಂಡ ಮಂಗಳವಾರ ತನ್ನ ವೆಬ್‌ಸೈಟ್‌ನಲ್ಲಿ ಈ ವಿಷಯ ಪ್ರಕಟಿಸಿದೆ. ಜಹೀರ್‌ ಅವರು 2009, 2010 ಮತ್ತು 2014ರ ಐಪಿಎಲ್‌ ಟೂರ್ನಿಗಳಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದರು. ಒಟ್ಟು 30 ಪಂದ್ಯಗಳನ್ನು ಆಡಿ 29 ವಿಕೆಟ್‌ ಉರುಳಿಸಿದ್ದರು.
ಪಶ್ಚಿಮ ಬಂಗಾಳದ 16ರ ಹರೆ ಯದ ಪ್ರಯಾಸ್‌ ಅವರನ್ನು ಆರ್‌ಸಿಬಿ ಸೆಳೆದುಕೊಂಡಿತು.  ಪ್ರಯಾಸ್‌, ವಿಜಯ್‌ ಹಜಾರೆ ಟ್ರೋಫಿಯಲ್ಲಿ ಮಿಂಚಿದ್ದರು. ಪ್ರಭ್ ಸಿಮ್ರನ್‌ ಸಿಂಗ್, ಕಿಂಗ್ಸ್‌ ಇಲೆ ವನ್‌ ಪಂಜಾಬ್‌ ತಂಡದ ಪಾಲಾದರು. ರೂ. 20 ಲಕ್ಷ ಮೂಲಬೆಲೆ ಹೊಂದಿದ್ದ ಇವರಿಗೆ ಸಿಕ್ಕಿದ್ದು ರೂ. 4.8 ಕೋಟಿ.
ಮಾರಾಟವಾಗದವರು (ರೂ. 20 ಲಕ್ಷ ಮೂಲಬೆಲೆ ಹೊಂದಿದ್ದವರು)
ಮನನ್‌ ವೊಹ್ರಾ, ಸಚಿನ್‌ ಬೇಬಿ, ಅಂಕಿತ್‌ ಬಾವ್ನೆ, ಅರ್ಮಾನ್‌ ಜಾಫರ್‌, ಆಕಾಶ್‌ದೀಪ್‌ ನಾಥ್‌, ಆಯುಷ್‌ ಬದೋನಿ, ಜಲಜ್‌ ಸಕ್ಸೇನಾ, ಶೆಲ್ಡನ್‌ ಜಾಕ್ಸನ್‌, ಬಾಬಾ ಇಂದ್ರಜಿತ್‌, ಅನುಜ್‌ ರಾವತ್‌, ಕೆ.ಎಸ್‌.ಭರತ್‌, ಕೆ.ಬಿ.ಅರುಣ್‌ ಕಾರ್ತಿಕ್‌, ಅನಿಕೇತ್‌ ಚೌಧರಿ, ಇಶಾನ್‌ ಪೊರೆಲ್‌, ರಜನೀಶ್‌ ಗುರುಬಾನಿ, ಚಾಮಾ ಮಿಲಿಂದ್‌, ತುಷಾರ್‌ ದೇಶ‍ಪಾಂಡೆ, ಯುವರಾಜ್‌ ಚೂಡಸಾಮಾ, ಜಹೀರ್‌ ಖಾನ್‌ ಪಕ್ತೀನ್‌, ರವಿಸಾಯಿ ಕಿಶೋರ್‌, ಎಂ.ಅಶ್ವಿನ್‌.
ಮಾರಾಟವಾಗದ ಕನ್ನಡಿಗರು
ಜೆ.ಸುಚಿತ್‌ (ರೂ. 20 ಲಕ್ಷ)
ಕೆ.ಸಿ.ಕಾರ್ಯಪ್ಪ (ರೂ. 20 ಲಕ್ಷ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com