ಕ್ಯಾಚ್ ಪಡೆದ ಗ್ರಿಮ್ ಸ್ಟೋನ್ (ಚಿತ್ರ ಕೃಪೆ: ಸ್ಕೈ ಸ್ಪೋರ್ಟ್ಸ್)
ಕ್ರಿಕೆಟ್
ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಲೇ 23 ಲಕ್ಷ ರೂ. ಬಹುಮಾನ ಗೆದ್ದ ಕ್ರಿಕೆಟ್ ಅಭಿಮಾನಿ!
ಕ್ರಿಕೆಟ್ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಭಾರಿ ಅಭಿಮಾನಿ ಬಳಗವನ್ನು ಸಂಪಾದಿಸಿದ್ದು, ಇದೀಗ ಕ್ರಿಕೆಟ್ ನಿಂದಲೇ ಅಭಿಮಾನಿಯೋರ್ವ ಲಕ್ಷಾಧೀಶ್ವರನಾಗಿದ್ದಾನೆ.
ಆಕ್ಲೆಂಡ್: ಕ್ರಿಕೆಟ್ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಭಾರಿ ಅಭಿಮಾನಿ ಬಳಗವನ್ನು ಸಂಪಾದಿಸಿದ್ದು, ಇದೀಗ ಕ್ರಿಕೆಟ್ ನಿಂದಲೇ ಅಭಿಮಾನಿಯೋರ್ವ ಲಕ್ಷಾಧೀಶ್ವರನಾಗಿದ್ದಾನೆ.
ಹೌದು.. ಆಕ್ಲೆಂಡ್ ನಲ್ಲಿ ನಡೆದ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ತ್ರಿಕೋನ ಸರಣಿಯ ಪಂದ್ಯದಲ್ಲಿ ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಅಭಿಮಾನಿಯೋರ್ವ ಬರೊಬ್ಬರಿ 23 ಲಕ್ಷ ರೂ, ಗೆದ್ದಿದ್ದಾನೆ. ಶುಕ್ರವಾರ ರಾತ್ರಿ ಆಕ್ಲೆಂಡ್ ಮೈದಾನದಲ್ಲಿ ರಾಸ್ ಟೇಲರ್ ಅವರು ಸಿಕ್ಸರ್ ಗೆ ಅಟ್ಟಿದ ಚೆಂಡನ್ನು ಕ್ಯಾಚ್ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವಿದ್ಯಾರ್ಥಿಯೋರ್ವ ಕ್ಯಾಚ್ ತೆಗೆದುಕೊಂಡು 23 ಲಕ್ಷ ರೂ. (50 ಸಾವಿರ ಡಾಲರ್)ಮೊತ್ತದ ಬಹುಮಾನವನ್ನು ಜೇಬಿಗಿಳಿಸಿದ್ದಾನೆ.
ಆಸ್ಟ್ರೇಲಿಯದ ಆ್ಯಂಡ್ರೊ ಟೈ ಅವರ ಎಸೆತದಲ್ಲಿ ನ್ಯೂಜಿಲೆಂಡ್ ನ ರಾಸ್ ಟೇಲರ್ ಚೆಂಡನ್ನು ಸ್ಕೇರ್ ಲೆಗ್ ಬೌಂಡರಿ ಮೂಲಕ ಸಿಕ್ಸರ್‌ಗೆ ಅಟ್ಟಿದರು. ಆಗ ಪ್ರೇಕ್ಷಕರ ಗ್ಯಾಲರಿಯತ್ತ ಬರುತ್ತಿದ್ದ ಚೆಂಡನ್ನು ವಿದ್ಯಾರ್ಥಿ ಮಿಚ್ ಗ್ರಿಮ್‌ಸ್ಟೋನ್ ಎಡಗೈಯಲ್ಲಿ ಕ್ಯಾಚ್ ತೆಗೆದುಕೊಂಡರು. ಗ್ರೀಮ್‌ಸ್ಟೋನ್ ಕ್ಯಾಚ್ ತೆಗೆದುಕೊಳ್ಳುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು ಆತನನ್ನು ಅಭಿನಂದಿಸಿದರು.
ಈ ಸರಣಿಯಲ್ಲಿ ಪ್ರೇಕ್ಷಕರ ಗ್ಯಾಲರಿಯತ್ತ ಬರುವ ಚೆಂಡನ್ನು ಕ್ಯಾಚ್ ಪಡೆದ ವೀಕ್ಷಕರಿಗೆ ಬಹುಮಾನ ನಿಗದಿ ಪಡಿಸಲಾಗಿದ್ದು, ಅದರಂತೆ ರಾಸ್ ಟೇಲರ್ ಸಿಡಿಸಿದ ಕ್ಯಾಚ್ ಪಡೆದ ಗ್ರಿಮ್ ಸ್ಟೋನ್ ಬಹುಮಾನ ಗಿಟ್ಟಿಸಿದ್ದ. ಆತನೇ ಹೇಳಿಕೊಂಡಿರುವಂತೆ ಆತನಿಗೆ ಇದು ಎರಡನೇ ಬಾರಿ ಬಹುಮಾನವಂತೆ. ಕಳೆದ ತಿಂಗಳು ಡುನೆಡಿನ್‌ನಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ಕ್ಯಾಚ್ ತೆಗೆದುಕೊಂಡು ಇದೇ ಗ್ರಿಮ್ ಸ್ಟೋನ್ 23 ಲಕ್ಷ ರೂ. ಮೊತ್ತದ ಬಹುಮಾನ ಪಡೆದಿದ್ದನಂತೆ.
That guy who caught Taylor's catch of the second last ball of the innings in the crowd just won $50,000 !!!!!
Well done , that wasn't an easy one , one handed beauty
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ