ಭಾರತ ಸರಣಿಯಿಂದ ದಕ್ಷಿಣ ಆಫ್ರಿಕಾ ನಾಯಕ ಡುಪ್ಲೇಸಿಸ್ ಕಲಿತ ಪಾಠವೇನು ಗೊತ್ತ?

ಪ್ರವಾಸಿ ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಹಾಗೂ ಏಕದಿನ ಮತ್ತು ಟಿ20 ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಸೋತಿದ್ದು ಇದೀಗ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ...
ಡುಪ್ಲೇಸಿಸ್
ಡುಪ್ಲೇಸಿಸ್
ಪ್ರವಾಸಿ ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಹಾಗೂ ಏಕದಿನ ಮತ್ತು ಟಿ20 ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಸೋತಿದ್ದು ಇದೀಗ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ. 
ಇನ್ನು ತಮ್ಮ ಹಿಂದಿನ ತಂತ್ರವೊಂದು ತಮಗೆ ತಿರುಮಂತ್ರವಾಗಿದ್ದರಿಂದ ದಕ್ಷಿಣ ಆಫ್ರಿಕಾ ನಾಯಕ ಡುಪ್ಲೇಸಿಸ್ ಬುದ್ದಿ ಕಲಿತಿದ್ದಾರೆ. ಹೌದು ಭಾರತ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದು ಟೆಸ್ಟ್ ಸರಣಿ ಕೈವಶ ಮಾಡಿಕೊಂಡಿದ್ದ ಆಫ್ರಿಕಾ ತಂಡಕ್ಕೆ ಮೂರನೇ ಪಂದ್ಯದ ಸೋತು ದೊಡ್ಡ ಹೊಡೆತವನ್ನು ನೀಡಿತ್ತು. ಟೀಂ ಇಂಡಿಯಾ ಆಟಗಾರರು ಬೌನ್ಸಿ ಪಿಚ್ ಗಳಲ್ಲಿ ಆಡಲು ತಿಣುಕಾಡುತ್ತಾರೆ. ಹೀಗಾಗಿ ಪಿಚ್ ತಯಾರಿಕರಿಗೆ ಬೌಲಿಂಗ್ ಪಿಚ್ ರೆಡಿ ಮಾಡುವಂತೆ ಡುಪ್ಲೇಸಿಸ್ ಸೂಚಿಸಿದ್ದರಂತೆ ಆದರೆ ಅದೇ ಅವರಿಗೆ ಹಿನ್ನಡೆ ಉಂಟು ಮಾಡಿತ್ತು. ಆ ಪಂದ್ಯದಲ್ಲಿ ಆಫ್ರಿಕಾ ಪ್ರವಾಸಿ ಭಾರತ ವಿರುದ್ಧ 63 ರನ್ ಗಳಿಂದ ಸೋಲು ಕಂಡಿತ್ತು. 
ಜತೆಗೆ ಡರ್ಬನ್ ಪಿಚ್ ಕಳಪೆ ಮಟ್ಟವಾಗಿತ್ತು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಸಹ ಚೀಮಾರಿ ಹಾಕಿತ್ತು. 
ಸದ್ಯ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಆಫ್ರಿಕಾ ಟೆಸ್ಟ್ ಸರಣಿ ಆಡುತ್ತಿದೆ. ಏಷ್ಯನ್ ದೇಶಗಳ ಜತೆ ಆಡುವಾಗ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಆದರೆ ಆಸ್ಟ್ರೇಲಿಯನ್ನರು ಹಾಗೂ ನಾವು(ದಕ್ಷಿಣ ಆಫ್ರಿಕಾ) ಒಂದೇ ರೀತಿ ವಾತಾವರಣದಲ್ಲಿ ಆಡುವುದರಿಂದ ಬೇರೆ ರೀತಿಯ ಪಿಚ್ ಗಳನ್ನು ಸಿದ್ಧಪಡಿಸುವ ಅಗತ್ಯವೆನಿಲ್ಲ ಎಂದರು. 
ದಕ್ಷಿಣ ಆಫ್ರಿಕಾ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದ್ದು ಮೊದಲ ಟೆಸ್ಟ್ ಪಂದ್ಯ ಡರ್ಬನ್ ನಲ್ಲಿ ಪ್ರಾರಂಭವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com