ಚೆಂಡು ವಿರೂಪ ಮಾಡಿ ಸಿಕ್ಕಿಬಿದ್ರೆ ಇನ್ಮುಂದೆ ಐಸಿಸಿಯಿಂದ ಕಠಿಣ ಶಿಕ್ಷೆ!

ಕಳೆದ ತಿಂಗಳು ಆಸ್ಟ್ರೇಲಿಯಾ ಕ್ರಿಕೆಟಿಗರ ಚೆಂಡೂ ವಿರೂಪ ಪ್ರಕರಣ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ಚೆಂಡು ವಿರೂಪ ಮಾಡಿ ಸಿಕ್ಕಿಬಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ...
ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್
ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್
Updated on
ನವದೆಹಲಿ: ಕಳೆದ ತಿಂಗಳು ಆಸ್ಟ್ರೇಲಿಯಾ ಕ್ರಿಕೆಟಿಗರ ಚೆಂಡೂ ವಿರೂಪ ಪ್ರಕರಣ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ಚೆಂಡು ವಿರೂಪ ಮಾಡಿ ಸಿಕ್ಕಿಬಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯಿಂದ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. 
ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿದ್ದುಪಡಿ ತರಲಾಗಿದ್ದು ಈ ಹೊಸ ನಿಯಮಕ್ಕೆ ಐಸಿಸಿ ಮಂಡಳಿಯ ನಿರ್ದೇಶಕರಿಂದ ಸಂಪೂರ್ಣ ಒಪ್ಪಗೆ ಸಿಕ್ಕಿದೆ. 
ನೂತನ ತಿದ್ದುಪಡಿ ಪ್ರಕಾರ ಚೆಂಡು ವಿರೂಪ ಮಾಡಿ ಸಿಕ್ಕಿಬಿದ್ದು ಆರೋಪ ಸಾಬೀತಾದರೆ ಅಂತಹ ಆಟಗಾರನಿಗೆ 6 ಟೆಸ್ಟ್ ಅಥವಾ 12 ಏಕದಿನ ಪಂದ್ಯದಿಂದ ಬ್ಯಾನ್ ಮಾಡಲಾಗುತ್ತದೆ. 
ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರಿಚರ್ಡ್ ಸನ್ ಸಭೆಯ ಬಳಿಕ ಮಾತನಾಡಿ ಈ ತಿದ್ದುಪಡಿ ಜಂಟಲ್ ಮ್ಯಾನ್ ಗೇಮ್ ಅನ್ನು ಮತ್ತಷ್ಟು ಸುಧಾರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. 
ದಕ್ಷಿಣ ಆಫ್ರಿಕಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಕ್ಯಾಮೆರಾನ್ ಬ್ಯಾನ್ ಕ್ರಾಫ್ ಚೆಂಡೂ ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿದ್ದರು. ಈ ಪ್ರಕರಣದಲ್ಲಿ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ತಲೆ ದಂಡವಾಗಿತ್ತು. ಅಲ್ಲದೆ ನಿಷೇಧಕ್ಕೂ ಗುರಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com