ಕುಲ್ದೀಪ್ ಯಾದವ್
ಕ್ರಿಕೆಟ್
ಮತ್ತೆ ಆಂಗ್ಲರಿಗೆ ಮುಳುವಾದ ಕುಲ್ದೀಪ್ ಯಾದವ್!
ಟೀಂ ಇಂಡಿಯಾದ ಯುವ ಸ್ಪಿನ್ನರ್ ಚೈನಾಮೆನ್ ಖ್ಯಾತಿಯ ಕುಲ್ದೀಪ್ ಯಾದವ್ ಮತ್ತೆ ಆಂಗ್ಲರಿಗೆ ಮುಳುವಾಗಿದ್ದು ಕುಲ್ದೀಪ್ ಬೌಲಿಂಗ್ ಎದುರಿಸಲು ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಪರದಾಡುವಂತಾಯಿತು.
ಲಾರ್ಡ್ಸ್(ಲಂಡನ್): ಟೀಂ ಇಂಡಿಯಾದ ಯುವ ಸ್ಪಿನ್ನರ್ ಚೈನಾಮೆನ್ ಖ್ಯಾತಿಯ ಕುಲ್ದೀಪ್ ಯಾದವ್ ಮತ್ತೆ ಆಂಗ್ಲರಿಗೆ ಮುಳುವಾಗಿದ್ದು ಕುಲ್ದೀಪ್ ಬೌಲಿಂಗ್ ಎದುರಿಸಲು ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಪರದಾಡುವಂತಾಯಿತು.
ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲೂ ಕುಲ್ದೀಪ್ ಯಾದವ್ ಭರ್ಜರಿ ಬೌಲಿಂಗ್ ಮಾಡಿ ಪ್ರಮುಖ ಮೂರು ವಿಕೆಟ್ ಪಡೆದಿದ್ದಾರೆ.
ಇಂಗ್ಲೆಂಡ್ ಪರ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಆರಂಭಿಕರಾದ ಜೋಸನ್ ರಾಯ್ ಮತ್ತು ಬೈರ್ಸ್ಟೋವ್ ವಿಕೆಟ್ ಕಿತ್ತು ಆಂಗ್ಲರಿಗೆ ಮುಳ್ಳಾದರು. ಇದು ಉತ್ತಮ ಆರಂಭ ಪಡೆದಿದ್ದ ಆಂಗ್ಲರಿಗೆ ಮುಳುವಾಯಿತು.
ಈ ಮಧ್ಯೆ ಅರ್ಧ ಶತಕ ಸಿಡಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೋರ್ಗನ್ ವಿಕೆಟ್ ಪಡೆದರು. ಇನ್ನು ಕುಲ್ದೀಪ್ ಬೌಲಿಂಗ್ ಎದುರಿಸಲು ಇಂಗ್ಲೆಂಡ್ ಆಟಗಾರರು ಪರದಾಡುವಂತಾಯಿತು.
ಕುಲ್ದೀಪ್ ಯಾದವ್ 10 ಓವರ್ ನಲ್ಲಿ 68 ರನ್ ಹೊಡೆಸಿಕೊಂಡು 3 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ