ನವದೆಹಲಿ: ಅಕ್ರಮ ಸಂಬಂಧ ಹಾಗೂ ಪತ್ನಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಕೇಸ್ ದಾಖಲಾಗಿದ್ದು, ಈ ವರ್ಷದ ಐಪಿಎಲ್ ಕೈ ತಪ್ಪುವ ಸಾಧ್ಯತೆ.
ಶಮಿ ವಿರುದ್ಧ ಅವರ ಪತ್ನಿ ಹಸಿನ್ ಜಹಾನ್ ಗೃಹ ಹಿಂಸಾಚಾರ ಪ್ರಕರಣ ದಾಖಲಿಸಿದ್ದು, ಫ್ರಾಂಚೈಸಿ ವೇಗಿಯನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬುದರ ಕುರಿತು ಬಿಸಿಸಿಐ ನಿರ್ದೇಶನಕ್ಕಾಗಿ ಕಾಯುತ್ತಿದೆ.
ಬಿಸಿಸಿಐ ಈಗಾಗಲೇ 27 ವರ್ಷದ ಮೊಹಮ್ಮದ್ ಶೆಮಿ ಸೆಂಟ್ರಲ್ ಕಾಂಟ್ರ್ಯಾಕ್ಟ್ ಅನ್ನು ತಡೆ ಹಿಡಿದಿದೆ. ಆದರೆ ಯಾವ ಕಾರಣಕ್ಕೆ ತಡೆ ಹಿಡಿಯಲಾಗಿದೆ ಎಂಬುದುರ ಬಗ್ಗೆ ತಕ್ಷಣಕ್ಕೆ ವಿವರಣೆ ನೀಡಿಲ್ಲ.
ಮೊಹಮ್ಮದ್ ಶಮಿ ಅಕ್ರಮ ಸಂಬಂಧ ಹೊಂದಿದ್ದು, ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ಹಸಿನ್ ಜಹಾನ್ ನೀಡಿದ ದೂರಿನ ಆಧಾರದ ಮೇಲೆ ಕೋಲ್ಕತಾ ಪೊಲೀಸರು ಕ್ರಿಕೆಟಿಗನ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣ ಇದೀಗ ಡೆಲ್ಲಿ ಡೇರ್ ಡೆವಿಲ್ಸ್ ಬೌಲರ್ ನ ಐಪಿಎಲ್ ಭವಿಷ್ಯಕ್ಕೆ ಕಂಟಕವಾಗಿದೆ.