ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ; ಬಿಸಿಸಿಐ ಬೆನ್ನು ಬಿದ್ದ ಕೋಲ್ಕತ್ತಾ ಪೊಲೀಸರು

ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ಎದುರಿಸುತ್ತಿರುವ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧದ ಪ್ರಕರಣಗಳ ತನಿಖೆಗಾಗಿ ಕೋಲ್ಕತ್ತಾ ಪೊಲೀಸರು ಬಿಸಿಸಿಐ ನೆರವು ಕೇಳಿದ್ದಾರೆ...
ಮೊಹಮ್ಮದ್ ಶಮಿ, ಹಸೀನ್ ಜಹಾನ್
ಮೊಹಮ್ಮದ್ ಶಮಿ, ಹಸೀನ್ ಜಹಾನ್
ಕೋಲ್ಕತ್ತಾ: ಕೌಟುಂಬಿಕ ದೌರ್ಜನ್ಯ, ವಿವಾಹೇತರ ಸಂಬಂಧ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ಎದುರಿಸುತ್ತಿರುವ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧದ ಪ್ರಕರಣಗಳ ತನಿಖೆಗಾಗಿ ಕೋಲ್ಕತ್ತಾ ಪೊಲೀಸರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೆರವು ಕೇಳಿದ್ದಾರೆ. 
ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಟೀಂ ಇಂಡಿಯಾ ತಂಡದ ವೇಳಾಪಟ್ಟಿ ಹೇಗಿತ್ತು ಮೊಹಮ್ಮದ್ ಶಮಿ ತವರಿಗೆ ಮರಳುವ ವೇಳೆ ದುಬೈನಲ್ಲಿ ತಂಗಿದ್ದರೇ ಎಂಬ ಬಗ್ಗೆ ಬಿಸಿಸಿಐನಿಂದ ಅವರು ಮಾಹಿತಿ ಕೇಳಿದ್ದಾರೆ. 
ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿ ಟೀಂ ಇಂಡಿಯಾದೊಂದಿಗೆ ತವರಿಗೆ ಮರಳುವ ವೇಳೆ ಶಮಿ ದುಬೈ ಹೋಟೆಲ್ ನಲ್ಲಿ ತಂಗಿದ್ದರು. ಈ ವೇಳೆ ಪಾಕಿಸ್ತಾನದ ಮಹಿಳೆಯೊಬ್ಬರು ಶಮಿ ಜತೆಗಿದ್ದರು. ಅಲ್ಲದೆ ಆಕೆ ಮ್ಯಾಚ್ ಫಿಕ್ಸಿಂಗ್ ಗಾಗಿ ಇಂಗ್ಲೆಂಡ್ ಮೂಲದ ಮೊಹಮ್ಮದ್ ಭಾಯ್ ಎಂಬ ವ್ಯಕ್ತಿ ನೀಡಿದ ಹಣವನ್ನು ಶಮಿಗೆ ಹಸ್ತಾಂತರಿಸಿದ್ದರು ಎಂದು ಶಮಿ ಪತ್ನಿ ಹಸೀನ್ ಜಹಾನ್ ಆರೋಪ ಮಾಡಿದ್ದಾರೆ. 
ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಶಮಿ ಟೆಸ್ಟ್ ಮತ್ತು ಏಕದಿನ ತಂಡದಲ್ಲಿದ್ದರು. ಹೀಗಾಗಿ ಕೊನೆಯದಾಗಿ ನಡೆದ ಟಿ20 ಸರಣಿಗೆ ಮುನ್ನವೇ ಅವರು ತವರಿನ ವಿಮಾನ ಏರಿದ್ದರು. ಈ ವೇಳೆ ಅವರು ಬಿಸಿಸಿಐ ಮಾರ್ಗಸೂಚಿಯಂತೆಯೇ ತವರಿಗೆ ಮರಳಿದ್ದರೇ ಎಂಬುದರ ಸತ್ಯಾಸತ್ಯತೆ ತಿಳಿಸುವ ಸಲುವಾಗಿ ಕೊಲ್ಕತ್ತಾ ಪೊಲೀಸರು ಬಿಸಿಸಿಐಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com