ಬಿಗ್ ಬಾಸ್ ಗೆ ಶಾಕ್: ಬಿಸಿಸಿಐಗೆ 121 ಕೋಟಿ ದಂಡ ವಿಧಿಸಿದ ಜಾರಿ ನಿರ್ದೇಶನಾಲಯ

2009ರ ಐಪಿಎಲ್ ಟೂರ್ನಿ ವೇಳೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐಗೆ ಜಾರಿ ನಿರ್ದೇಶನಾಲಯ ಬರೊಬ್ಬರಿ 121 ಕೋಟಿ ದಂಡ ವಿಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: 2009ರ ಐಪಿಎಲ್ ಟೂರ್ನಿ ವೇಳೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐಗೆ ಜಾರಿ ನಿರ್ದೇಶನಾಲಯ ಬರೊಬ್ಬರಿ 121 ಕೋಟಿ ದಂಡ ವಿಧಿಸಿದೆ.
2009ರ ಐಪಿಎಲ್ ಟೂರ್ನಿಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕೇಂದ್ರೀಯ ಆಯೋಗದ ವಿಶೇಷ ನಿರ್ದೇಶಕರು ಬಿಸಿಸಿಐಗೆ 82.66 ಕೋಟಿ ದಂಡ ವಿಧಿಸಿದೆ. ಇದಲ್ಲದೆ ಬಿಸಿಸಿನ ಅಂದಿನ ಅಧ್ಯಕ್ಷ ಎನ್ ಶ್ರೀನಿವಾಸನ್ ಗೆ 11.53 ಕೋಟಿ, ಅಂದಿನ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿಗೆ 10.65 ಕೋಟಿ ಹಾಗೂ ಅಂದಿನ ಬಿಸಿಸಿಐ ಖಜಾಂಚಿ ಎಂಪಿ ಪಾಂಡೋವ್ ಗೆ 9.72 ಕೋಟಿ ಮತ್ತು ಸ್ಟೇಟ್ ಬ್ಯಾಂಕ್ ತಿರುವಾಂಕೂರ್ ಗೆ (ಈಗ ಎಸ್ ಬಿಐನೊಂಗೆ ವಿಲೀನ ಗೊಂಡಿದೆ) 7 ಕೋಟಿ ದಂಡ ವಿಧಿಸಿದೆ. 
ಈ ಎಲ್ಲ ಮೊತ್ತಗಳು ಸೇರಿ 121.56 ಕೋಟಿ ಆಗಲಿದ್ದು, ಇದನ್ನು ಬಿಸಿಸಿಐ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಈ ದಂಡವನ್ನು 45 ದಿನಗಳೊಳಗೆ ಪಾವತಿಸುವಂತೆ ಆದೇಶಿಸಲಾಗಿದೆ.
2009ರಲ್ಲಿ ದೇಶದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಭಾರತದಿಂದ ದಕ್ಷಿಣ ಆಫ್ರಿಕಾಗೆ ಸ್ಥಳಾಂತರ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಅಂದಿನ ಬಿಸಿಸಿಐ ಅದ್ಯಕ್ಷ ಎನ್ ಶ್ರೀನಿವಾಸನ್, ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಮತ್ತು ಬಿಸಿಸಿಐ ಖಜಾಂಚಿ ಪಾಂಡೋವ್ ದಕ್ಷಿಣ ಆಫ್ರಿಕಾಗೆ ಸುಮಾರು 243 ಕೋಟಿ ಹಣವನ್ನು ವರ್ಗಾವಣೆ ಮಾಡಿದ್ದರು. ದೇಶದ ಹಣವನ್ನು ವಿದೇಶಕ್ಕೆ ವರ್ಗಾವಣೆ ಮಾಡುವಾಗ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ಸೂಚನೆಗಳನ್ನು ಪಾಲಿಸಬೇಕಿತ್ತು. ಆದರೆ ಬಿಸಿಸಿಐ ಈ ಕಾಯ್ದೆಯ ಯಾವುದೇ ನಿಯಮಗಳನ್ನು ಪಾಲಿಸಿರಲಿಲ್ಲ. ಇದು ಆರ್ ಬಿಐ ಕೆಂಗಣ್ಣಿಗೆ ಕಾರಣವಾಗಿತ್ತು.
ಈ ಸಂಬಂಧ ಕೇಂದ್ರ ಸರ್ಕಾರ ತನಿಖೆಗೆ ಆದೇಶ ನೀಡಿತ್ತು. ಇದೀಗ ಈ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಬಿಸಿಸಿಗೆ 121 ಕೋಟಿ ದಂಡ ವಿಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com