ವಿರಾಟ್ ಕೊಹ್ಲಿ, ಅಂಬಟ್ಟಿ ರಾಯುಡು
ಕ್ರಿಕೆಟ್
ಕೊಹ್ಲಿ ಬ್ಯಾಟ್ ರಾಯುಡು ಭರ್ಜರಿ ಆಟಕ್ಕೆ ಕಾರಣವಂತೆ, ಅದು ಹೇಗೆ!
2018ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ...
ಚೆನ್ನೈ: 2018ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಚೆನ್ನೈ ತಂಡದಲ್ಲಿ ಆಡಿದ್ದ ಅಂಬಟ್ಟಿ ರಾಯುಡು ಭರ್ಜರಿ ಬ್ಯಾಟಿಂಗ್ ಮಾಡಿದ್ದು ಟೂರ್ನಿಯಲ್ಲಿ ಮೂರನೇ ಗರಿಷ್ಠ ರನ್ ಗಳಿಕೆ ಮಾಡಿದ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಇನ್ನು ರಾಯುಡು ಭರ್ಜರಿ ಬ್ಯಾಟಿಂಗ್ ಗೆ ಕಾರಣ ಏನು ಎಂಬುದನ್ನು ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಟೀಂ ಇಂಡಿಯಾದ ನಾಯಕ, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯಿಂದ ರಾಯುಡು ಪ್ರತಿ ವರ್ಷ ಬ್ಯಾಟ್ ಪಡೆದುಕೊಳ್ಳುತ್ತಾರಂತೆ. ಹೀಗೆ ಕೊಹ್ಲಿಯಿಂದ ಪಡೆದ ಬ್ಯಾಟ್ ನಿಂದ ಭರ್ಜರಿ ರನ್ ಗಳಿಸಿದ್ದೇನೆ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಚೆನ್ನೈ ತಂಡದ ಆಟಗಾರ ಹರ್ಭಜನ್ ಸಿಂಗ್ ಮತ್ತು ರಾಯುಡು ಅವರು ಅತಿಥಿಯಾಗಿ ಭಾಗವಹಿಸಿದ್ದು ಈ ವೇಳೆ ರಾಯುಡು ತಮ್ಮ ಬ್ಯಾಟಿಂಗ್ ಸೀಕ್ರೆಟ್ ಅನ್ನು ಬಹಿರಂಗಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ