ಕೊಹ್ಲಿ ಭಾವನಾತ್ಮಕತೆಗೊಳಗಾಗಿ ಸಂಯಮ ಕಳೆದುಕೊಂಡಿದ್ದರು ಎಂದು ವಿಶ್ವನಾಥ್ ಆನಂದ್ ಹೇಳಿದ್ದೇಕೆ?

ಪಂದ್ಯದ ವೇಳೆ ಮೈದಾನದಲ್ಲಿ ಅಗ್ರೇಸಿವ್ ಆಗಿ ಆಡುವ ವಿರಾಟ್ ಕೊಹ್ಲಿ ಅವರು ಇತ್ತೀಚೆಗಷ್ಟೇ ಮೈದಾನದ ಹೊರಗಡೆ ತಮ್ಮ ಸಂಯಮ ಕಳೆದುಕೊಂಡು ಅಭಿಮಾನಿಯೊಬ್ಬರಿಗೆ ದೇಶ ಬಿಟ್ಟು ಹೋಗಿ...
ವಿರಾಟ್ ಕೊಹ್ಲಿ, ವಿಶ್ವನಾಥ್ ಆನಂದ್
ವಿರಾಟ್ ಕೊಹ್ಲಿ, ವಿಶ್ವನಾಥ್ ಆನಂದ್
Updated on
ಕೊಲ್ಕತ್ತಾ: ಪಂದ್ಯದ ವೇಳೆ ಮೈದಾನದಲ್ಲಿ ಅಗ್ರೇಸಿವ್ ಆಗಿ ಆಡುವ ವಿರಾಟ್ ಕೊಹ್ಲಿ ಅವರು ಇತ್ತೀಚೆಗಷ್ಟೇ ಮೈದಾನದ ಹೊರಗಡೆ ತಮ್ಮ ಸಂಯಮ ಕಳೆದುಕೊಂಡು ಅಭಿಮಾನಿಯೊಬ್ಬರಿಗೆ ದೇಶ ಬಿಟ್ಟು ಹೋಗಿ ಎಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದರು. 
ಐದು ಬಾರಿ ಚೆಸ್ ವಿಶ್ವ ಚಾಂಪಿಯನ್ ಆಗಿರುವ ವಿಶ್ವನಾಥ್ ಆನಂದ್ ಅವರು ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ್ದು ದೇಶದ ವಿಚಾರವಾಗಿ ಮಾತನಾಡಿದ್ದಕ್ಕೆ ಕೊಹ್ಲಿ ಅವರು ಸಂಯಮ ಕಳೆದುಕೊಂಡು ಅಭಿಮಾನಿಗೆ ಈ ರೀತಿ ಹೇಳಿದ್ದರು ಎಂದು ಹೇಳಿದ್ದಾರೆ. 
ಈ ಸಂಬಂಧ ಪ್ರತಿಕ್ರಿಯಿಸಿರುವ ವಿಶ್ವನಾಥ್ ಆನಂದ್ ಅವರು ಅಭಿಮಾನಿಯ ಹೇಳಿಕೆಯಿಂದ ಬೇಸರಗೊಂಡ ಕೊಹ್ಲಿ ಅವರು ಭಾವನಾತ್ಮಕತೆಗೆ ಒಳಗಾಗಿ ತಮ್ಮ ಮನಸ್ಸಿನಲ್ಲಿ ಮೂಡಿದ ವಿಚಾರವನ್ನು ಟ್ವೀಟ್ ಮಾಡಿರಬಹುದು ಎಂದು ವಿಶ್ವನಾಥ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಕ್ರೀಡೆಯಲ್ಲಿ ಇದು ಸಹಜ. ಮೈದಾನದಲ್ಲಿ ಅಗ್ರೇಸಿವ್ ಆಗಿ ವರ್ತಿಸುವ ವ್ಯಕ್ತಿ ಮೈದಾನದ ಹೊರಗು ಕೆಲವೊಂದು ವೇಳೆ ಸಂಯಮ ಕಳೆದುಕೊಂಡು ವರ್ತಿಸುವುದು ಸಾಮಾನ್ಯ ಎಂದು ವಿಶ್ವನಾಥ್ ಹೇಳಿದ್ದಾರೆ.
ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸುಮ್ಮನೆ ಹೆಚ್ಚಿನ ಪ್ರಚಾರ ಸಿಗುತ್ತಿದೆ. ಆದರೆ ಬ್ಯಾಟಿಂಗ್‌ನಲ್ಲಿ ಅಂತಹಾ ವಿಶೇಷತೆ ಏನೂ ಇರಲ್ಲ. ಇಂಗ್ಲೀಷ್ ಅಥವಾ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ನನಗೆ ಹೆಚ್ಚು ಖುಷಿ ನೀಡುತ್ತೆ ಎಂದು ಆಪ್ ನಲ್ಲಿ ವ್ಯಕ್ತಿಯೋರ್ವರು ಕಾಮೆಂಟ್ ಮಾಡಿದ್ದರು. ಇದಕ್ಕೆ ಕೊಹ್ಲಿ ಆಗಿದ್ದರೆ ಮೊದಲು ನೀವು ದೇಶ ಬಿಟ್ಟು ಹೋಗಿ ಎಂದು ಟ್ವೀಟ್ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com