ವಿಜಯ್ ಹಜಾರೆ ಟ್ರೋಫಿ: ಮೂರನೇ ಬಾರಿಗೆ ಚಾಂಪಿಯನ್ ಆದ ಮುಂಬೈ, ದೆಹಲಿ ವಿರುದ್ಧ 4 ವಿಕೆಟ್ ಜಯ

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ದೆಹಲಿ ವಿರುದ್ಧ ಮುಂಬೈಗೆ ನಾಲ್ಕು ವಿಕೆಟ್ ಗಳ ಜಯ ಲಭಿಸಿದೆ.
ವಿಜಯ್ ಹಜಾರೆ ಟ್ರೋಫಿ: ಮೂರನೇ ಬಾರಿಗೆ ಚಾಂಪಿಯನ್ ಆದ ಮುಂಬೈ
ವಿಜಯ್ ಹಜಾರೆ ಟ್ರೋಫಿ: ಮೂರನೇ ಬಾರಿಗೆ ಚಾಂಪಿಯನ್ ಆದ ಮುಂಬೈ
ಬೆಂಗಳೂರು: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ದೆಹಲಿ ವಿರುದ್ಧ ಮುಂಬೈಗೆ 4 ವಿಕೆಟ್ ಗಳ ಜಯ ಲಭಿಸಿದೆ.
ಆದಿತ್ಯ ತಾರೆ ಹಾಗೂ ಸಿದ್ದೇಶ್ ಲಾಡ್ ಅದ್ಭುತ ಜತೆಯಾಟದ ಕಾರಣ ಮುಂಬೈ ತಂಡವು ಗೆಲುವು ಸಾಧಿಸಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ದೆಹಲಿ ತಂಡ 45.4  ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. 
ದೆಹಲಿ ಪರವಾಗಿ ಸಂದೀಪ್ ಸೈನಿ 3 ವಿಕೆಟ್ ಕಬಳಿಸಿದ್ದರು. ಇದರಿಂದ ಅಲ್ಪ ಗುರಿಯನ್ನು ಬೆನ್ನಟ್ಟಿದ ಮುಂಬೈ ಗೆ ಪ್ರಾರಂಭದಲ್ಲಿ ಆಗ್ತಾವೇ ಆಗಿತ್ತು. ಆದರೆ ಆದಿತ್ಯ ತಾರೆ (71) ಹಾಗೂ ಸಿದ್ದೇಶ್ ಲಾಡ್ (48) ತಂಡಕ್ಕೆ ಆಸರೆಯಾದರು.
ಈ ಜೋಡಿ ಒಟ್ಟು ೧೦೫ ರನ್ ಜತೆಯಾಟ ನೀಡಿ ಮುಂಬೈಗೆ ಗೆಲುವಿನ ಭರವಸೆ ಮೂಡಿಸಿದೆ.
ಇದರೊಡನೆ ಮುಂಬೈ ಮೂರನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದಿದ್ದರೆ ದೆಹಲಿ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು.
ಕಳೆದ ಬಾರಿಯ ಚಾಂಪಿಯನ್ ಆಗಿದ್ದ ಕರ್ನಾಟಕ ಈ ಬಾರಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹಿಂದೆ ಸರಿದಿತ್ತು.
ಸಂಕ್ಷಿಪ್ತ ಸ್ಕೋರ್
ದೆಹಲಿ: 177/9 (45.4 ಓವರ್)
ಮುಂಬೈ: 180/6 (35 ಓವರ್)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com