ವೆಸ್ಟ್ ಇಂಡೀಸ್ ನೀಡಿದ ಬೃಹತ್ ರನ್ ಗಳ ಗುರಿಯ ಹೊರತಾಗಿಯೂ ಟೀಂ ಇಂಡಿಯಾ ಗೆಲುವಿನ ಹೊಸ್ತಿಲಲ್ಲಿದ್ದು, ರೋಹಿತ್ ಶರ್ಮಾ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಶತಕಗಳ ನೆರವಿನಿಂದ ಭಾರತ ಗೆಲುವಿನ ಹಾದಿಯಲ್ಲಿ ಸಾಗಿದೆ. ಪ್ರಮುಖವಾಗಿ ವಿರಾಟ್ ಕೊಹ್ಲಿ ಶತಕದ ಬೆನ್ನಲ್ಲೇ ರೋಹಿತ್ ಶರ್ಮಾ ಕೂಡ ತಮ್ಮ ಅಮೋಘ ಇನ್ನಿಂಗ್ಸ್ ಮೂಲಕ ಶತಕ ಸಿಡಿಸಿದ್ದು, ಕೇವಲ 84 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.