ಭಾರತೀಯನು ಸೇರಿದಂತೆ ಕ್ರಿಕೆಟ್ ಜಗತ್ತಿನಲ್ಲಿ ಒಂದೂ ಸಿಕ್ಸರ್ ಸಿಡಿಸದ ಬ್ಯಾಟ್ಸ್‌ಮನ್‌ಗಳಿವರು!

ಕ್ರಿಕೆಟ್ ಅಂದರೆ ಹೊಡಿ ಬಡಿ ಆಟ. ಅದರಲ್ಲೂ ಎದುರಾಳಿ ಬೌಲರ್ ಗೆ ಸಿಕ್ಸರ್ ಬಾರಿಸಿ ತನ್ನ ತಾಕತ್ ಎನೆಂದೂ ತೋರಿಸುವುದು ಮುಖ್ಯವಾಗಿರುತ್ತದೆ. ಅಂತೆ ಕ್ರಿಕೆಟ್ ಇತಿಹಾಸದಲ್ಲೇ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಕ್ರಿಕೆಟ್ ಅಂದರೆ ಹೊಡಿ ಬಡಿ ಆಟ. ಅದರಲ್ಲೂ ಎದುರಾಳಿ ಬೌಲರ್ ಗೆ ಸಿಕ್ಸರ್ ಬಾರಿಸಿ ತನ್ನ ತಾಕತ್ ಎನೆಂದೂ ತೋರಿಸುವುದು ಮುಖ್ಯವಾಗಿರುತ್ತದೆ. ಅಂತೆ ಕ್ರಿಕೆಟ್ ಇತಿಹಾಸದಲ್ಲೇ ಒಂದೂ ಸಿಕ್ಸರ್ ಬಾರಿಸದ ಆಟಗಾರರು ಇದ್ದಾರೆ ಅಂದರೆ ಆಶ್ಚರ್ಯ ಪಡಬೇಕು. 
ಹೌದು, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಒಂದೂ ಸಿಕ್ಸರ್ ಬಾರಿಸದ ಐವರು ಆಟಗಾರರಿದ್ದು ಅದರಲ್ಲಿ ಭಾರತೀಯನೂ ಕೂಡಾ ಇದ್ದಾರೆ. 
ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಕಾಲಮ್ ಫರ್ಗ್ಯುಸನ್ 2009ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿ ತಂಡದ ಪರ 30 ಏಕದಿನ ಪಂದ್ಯಗಳನ್ನಾಡಿದ್ದರು. ಇನ್ನು 5 ಅರ್ಧ ಶತಕ ಸಿಡಿಸಿರುವ ಕಾಲಮ್ 662 ರನ್ ಗಳಿಸಿದ್ದಾರೆ. ಆದರೆ 30 ಪಂದ್ಯಗಳಲ್ಲಿ ಕಾಲಮ್ ಒಂದೂ ಸಿಕ್ಸರ್ ಬಾರಿಸಲು ವಿಫಲರಾಗಿದ್ದಾರೆ. 
ತಿಲಾನ್ ಸಮರವೀರ ಶ್ರೀಲಂಕಾ ತಂಡದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಲಂಕಾದ ದಿಗ್ಗಜ ಆಟಗಾರರಾದ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ಜೊತೆ ಟೆಸ್ಟ್ ಕ್ರಿಕೆಟ್ ಜೊತೆ ಆಡಿರುವ ಸಮರವೀರ 81 ಟೆಸ್ಟ್ ಪಂದ್ಯಗಳಲ್ಲಿ 5000 ರನ್ ಪೂರೈಸಿದ್ದಾರೆ. ಆದರೆ ಏಕದಿನ ಕ್ರಿಕೆಟ್ ನಲ್ಲಿ 53 ಪಂದ್ಯಗಳನ್ನಾಡಿರುವ ಅವರು 862 ರನ್ ಗಳಿಸಿದ್ದು ಒಂದೇ ಒಂದು ಸಿಕ್ಸರ್ ಬಾರಿಸಲು ಸಾಧ್ಯವಾಗಿಲ್ಲ. 
ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಜೆಫ್ರೀ ಬಾಯ್ಕಾಟ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು 36 ಏಕದಿನ ಪಂದ್ಯಗಳನ್ನು ಆಡಿರುವ ಅವರು ಒಂದು ಶತಕ ಸೇರಿದಂತೆ 9 ಅರ್ಧ ಶತಕಗಳನ್ನು ದಾಖಲಿಸಿದ್ದರೂ ಒಂದು ಸಿಕ್ಸರ್ ಬಾರಿಸಲು ಸಾಧ್ಯವಾಗಿಲ್ಲ. 
2001ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಜಿಂಬಾಬ್ವೆ ತಂಡದ ಮಾಜಿ ಆಟಗಾರ ಡಾಯಿನ್ ಇಬ್ರಾಹಿಂ ಸಹ ಒಂದು ಸಿಕ್ಸರ್ ಬಾರಿಸಲು ವಿಫಲರಾಗಿದ್ದಾರೆ. 82 ಏಕದಿನ ಪಂದ್ಯಗಳನ್ನು ಆಡಿರುವ ಡಾಯಿನ್ 1442 ರನ್ ಗಳನ್ನು ಪೇರಿಸಿದ್ದು ಒಂದು ಶತಕ ಮತ್ತು ನಾಲ್ಕು ಅರ್ಧ ಶತಕ ದಾಖಲಿಸಿದ್ದಾರೆ. ಬಾಂಗ್ಲಾದೇಶದೆದುರು 121 ರನ್ ಅತ್ಯಧಿಕ ರನ್ ಬಾರಿಸಿದ್ದು ಇವರ ಕ್ರಿಕೆಟ್ ಜೀವನದಲ್ಲಿ ಒಂದು ಸಿಕ್ಸರ್ ಬಾರಿಸಿಲ್ಲ. 
ಕ್ರಿಕೆಟ್ ನಲ್ಲಿ ಒಂದೂ ಸಿಕ್ಸರ್ ಬಾರಿಸದ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಮನೋಜ್ ಪ್ರಭಾಕರ್. 1984ರಲ್ಲಿ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ ಮಾಡಿದ್ದ ಮನೋಜ್ ಅವರು 98 ಏಕದಿನ ಪಂದ್ಯಗಳಲ್ಲಿ 1858 ರನ್ ಗಳನ್ನು ಗಳಿಸಿದ್ದು 2 ಶತಕ ಹಾಗೂ 11 ಅರ್ಧ ಶತಕ ಬಾರಿಸಿದ್ದರು. ಮನೋಜ್ ಬೌಲರ್ ಆಗಿದ್ದರು ತಂಡದ ಪರವಾಗಿ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದಿದ್ದರು. ಆದರೂ ಒಂದೂ ಸಿಕ್ಸರ್ ಬಾರಿಸದೇ ತಮ್ಮ ಕ್ರಿಕೆಟ್ ಬದುಕನ್ನು ಮುಗಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com