ಒಂದೆಡೆ ನಾಯಕನಾಗಿ ಕೊಹ್ಲಿ ವಿಫಲ, ನಾಯಕತ್ವ ತೊರೆದ ಬಗ್ಗೆ ಎಂಎಸ್ ಧೋನಿ ಹೇಳಿದ್ದೇನು ಗೊತ್ತ?

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಭೇಷ್ ಎನಿಸಿಕೊಂಡಿದ್ದು ನಾಯಕತ್ವದಲ್ಲಿ ಮಾತ್ರ ವೈಫಲ್ಯ ಕಂಡಿದ್ದಾರೆ. ಈ ಮಧ್ಯೆ ಟೀಂ ಇಂಡಿಯಾದ ಮಾಜಿ ನಾಯಕ...
ಎಂಎಸ್ ಧೋನಿ-ವಿರಾಟ್ ಕೊಹ್ಲಿ
ಎಂಎಸ್ ಧೋನಿ-ವಿರಾಟ್ ಕೊಹ್ಲಿ
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಭೇಷ್ ಎನಿಸಿಕೊಂಡಿದ್ದು ನಾಯಕತ್ವದಲ್ಲಿ ಮಾತ್ರ ವೈಫಲ್ಯ ಕಂಡಿದ್ದಾರೆ. ಈ ಮಧ್ಯೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರ ತಾವು ನಾಯಕತ್ವ ತೊರೆದ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. 
ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಚಾಂಪಿಯನ್ ತಂಡವನ್ನು ಮುನ್ನಡೆಸಿದ್ದ ಎಂಎಸ್ ಧೋನಿ ಅನಿರೀಕ್ಷಿತವಾಗಿ 2017ರಲ್ಲಿ ಏಕದಿನ, ಟಿ20 ಪಂದ್ಯಗಳ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಪ್ರಕಟಿಸಿ ಎಲ್ಲರಿಗೂ ಶಾಕ್ ನೀಡಿದ್ದರು. ತಾವು ಸೀಮಿತ ಓವರ್ ಗಳ ನಾಯಕತ್ವದಿಂದ ಕೆಳಗಿಳಿಯಲು ಕಾರಣವೇನು ಎಂಬುವುದನ್ನು ಧೋನಿ ಇದೀಗ ಬಹಿರಂಗಪಡಿಸಿದ್ದಾರೆ. 
ರಾಂಚಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧೋನಿ ಅವರು ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಲು ಈ ನಿರ್ಧಾರ ಮಾಡಿದ್ದೆ. ಏಕೆಂದರೆ 2019ರ ಐಸಿಸಿ ಏಕದಿನ ವಿಶ್ವಕಪ್ ಗೆ ತಂಡವನ್ನು ಸಿದ್ಧಪಡಿಸಲು ಹೊಸ ನಾಯಕತ್ವ ವಹಿಸುವ ಆಟಗಾರನಿಗೆ ಸಮಯವಕಾಶ ನೀಡಬೇಕಿತ್ತು. ಅಲ್ಲದೇ ಶಕ್ತಿಶಾಲಿ ತಂಡ ಕಟ್ಟುವ ಅವಕಾಶ ನೀಡಲು ನಾಯಕತ್ವದಿಂದ ಕೆಳಗಿಳಿಯಲೇ ಬೇಕಾಗಿತ್ತು ಎಂದು ಧೋನಿ ಹೇಳಿದ್ದಾರೆ. 
ತಂಡದಲ್ಲಿ ಬಲಿಷ್ಠ ಆಟಗಾರರು ಇರಬೇಕು ಎಂದು ಪ್ರತಿಯೊಂದು ತಂಡದ ನಾಯಕನು ಸಹ ಬಯಸುತ್ತಾನೆ. ಅದರಂತೆ ನಾಯಕನಿಗೆ ಹೆಚ್ಚಿನ ಸಮಯವಕಾಶ ನೀಡುವ ಉದ್ದೇಶದಿಂದ ನಾನು ನಾಯಕತ್ವದಿಂದ ಕೆಳಗಿಳಿದಿದ್ದೆ ಎಂದು ಧೋನಿ ಹೇಳಿದ್ದಾರೆ. 
ಎಂಎಸ್ ಧೋನಿ 2014ರ ಆಸ್ಟ್ರೇಲಿಯಾ ಟೆಸ್ಟ್ ಟೂರ್ನಿಯ ಮಧ್ಯದಲ್ಲೇ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದರು. ಅಲ್ಲದೆ ನಾಯಕತ್ವದಿಂದ ಕೆಳಗಿಳಿಯುತ್ತಿದ್ದಂತೆ ಟೆಸ್ಟ್ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com